Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ : ವೆಂಕಟೇಶ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.20) : ಸರ್ಕಾರಿ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿರುವುದರಿಂದ ಉರ್ದು ಶಾಲೆಗಳು ಕಣ್ಮರೆಯಾಗುತ್ತಿವೆ ಎಂದು ಡಯಟ್‍ನ ಹಿರಿಯ ಉಪನ್ಯಾಸಕ ವೆಂಕಟೇಶ್ ಬೇಸರದಿಂದ ನುಡಿದರು.

ಮುಸ್ಲಿಂ ಎಜುಕೇಷನಲ್ ಅಂಡ್ ಎಂಪವರ್‍ಮೆಂಟ್ ಟ್ರಸ್ಟ್(ರಿ) ಚಿತ್ರದುರ್ಗ ವತಿಯಿಂದ ಇಲ್ಲಿನ ಅಹಮದ್ ಪ್ಯಾಲೇಸ್‍ನಲ್ಲಿ ಗುರುವಾರ ಉರ್ದು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರೈಮರಿ, ಸೆಕಂಡರಿ ಶಿಕ್ಷಣ ಪೂರೈಸಿ ಡಿಗ್ರಿಗೆ ಬರುವಷ್ಟರೊತ್ತಿಗೆ ನೂರರಲ್ಲಿ ಶೇ.30 ಮುಸ್ಲಿಂ ಮಕ್ಕಳು ಮಾತ್ರ ಉಳಿದುಕೊಂಡಿರುತ್ತಾರೆ. ಮಿಕ್ಕವರು ಬಡತನ ಇನ್ನಿತರೆ ಕಾರಣಗಳಿಗಾಗಿ ಶಿಕ್ಷಣದಿಂದ ಹೊರಗುಳಿಯುವಂತಾಗಿದೆ.

ಯಾವುದೇ ಒಂದು ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಪೋಷಕರು ಮತ್ತು ಶಿಕ್ಷಕರುಗಳು ಗಂಭೀರವಾಗಿ ಚಿಂತಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಹೇಳಿದರು.

ಮಕ್ಕಳು ಶಿಕ್ಷಣವಂತರಾಗಬೇಕೆಂದು ಸರ್ಕಾರದ ಉದ್ದೇಶ. ಆದರೆ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದ್ದು, ಶಿಕ್ಷಕರುಗಳ ಸಂಖ್ಯೆ ಜಾಸ್ತಿಯಿರುವುದರಿಂದ ಇಲಾಖೆ ಹಾಗೂ ಸರ್ಕಾರಕ್ಕೆ ಮುಜುಗರವಾಗುತ್ತಿದೆ. ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳಂತೆ ಪ್ರೀತಿಸಿ ಹಾಜರಾತಿ ಹೆಚ್ಚಳವಾಗುವಂತೆ ನೋಡಿಕೊಳ್ಳುವಲ್ಲಿ ನಿಮ್ಮ ಪಾತ್ರ ತುಂಬಾ ಮುಖ್ಯ ಎಂದು ಶಿಕ್ಷಕರುಗಳಿಗೆ ಕರೆ ನೀಡಿದ ವೆಂಕಟೇಶ್ ಉರ್ದು ಜೊತೆಗೆ ಮಕ್ಕಳಿಗೆ ಕನ್ನಡವನ್ನು ಕಲಿಸಿ ಎಂದು ತಾಕೀತು ಮಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಮಾತನಾಡಿ ಶಿಕ್ಷಣ ಪಡೆದು ಒಂದು ಹಂತಕ್ಕೆ ಏರಿದವರು ಸಮಾಜದ ಕಡೆಗೆ ತಿರುಗಿ ನೋಡುವುದಿಲ್ಲ. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಎಂದಿಗೂ ತಮಗಾಗಿ ಬದುಕಲಿಲ್ಲ. ದೇಶಕ್ಕಾಗಿ ಬದುಕಿದರು.

ಸರ್ಕಾರಿ ಉರ್ದು ಶಾಲೆಗಳ ಸಬಲೀಕರಣವಾಗಬೇಕಾದರೆ ಗುಣಮಟ್ಟದ ಶಿಕ್ಷಣ ನೀಡಬೇಕು. ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳಿಂದ ಸಾಮಾಜಿಕ, ಆರ್ಥಿಕ ಸಮಸ್ಯೆ ನಿವಾರಣೆಯಾಬೇಕಾದರೆ ಶಿಕ್ಷಣವೊಂದೆ ಅಸ್ತ್ರ ಎಂದು ಹೇಳಿದರು.

ಮಕ್ಕಳನ್ನು ಪ್ರೀತಿಸುವವರೆ ನಿಜವಾದ ಶಿಕ್ಷಕರು, ಏಳನೇ ವೇತನ ಆಯೋಗ, ಬಡ್ತಿ ಮತ್ತು ವೇತನ ಶ್ರೇಣಿಯಲ್ಲಿನ ತಾರತಮ್ಯ ನಿವಾರಣೆಗಾಗಿ ಸರ್ಕಾರ ಮತ್ತು ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿದ್ದೇವೆ. ನಿಮ್ಮ ಸಮಸ್ಯೆಗಳ ನಿವಾರಣೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸಮಸ್ಯೆ ಸವಾಲುಗಳ ನಡುವೆ ಪ್ರಾಮಾಣಿಕವಾಗಿ ಕೆಲಸ ಮಾಡೋಣ. ಸಾವಿತ್ರಿ ಬಾಪುಲೆ ಜನ್ಮ ದಿನವನ್ನು ಶಿಕ್ಷಕಿ ದಿನಾಚರಣೆಯನ್ನಾಗಿ ಆಚರಿಸಬೇಕು. ಫಾತಿಮ ಶೇಖ್ ಮೊಟ್ಟ ಮೊದಲ ಶಿಕ್ಷಕಿ ಎನ್ನುವುದನ್ನು ಸ್ಮರಿಸಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜ ಮಾತನಾಡುತ್ತ ಉರ್ದು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೃದಯದ ಮಿಡಿತವನ್ನು ಹೇಳುವ ಶಕ್ತಿ ಭಾಷೆಗಿದೆ. 24 ಭಾಷೆಗಳಲ್ಲಿ ಉರ್ದು ಕೂಡ ಒಂದು. ಭಾಷಾ ಶಿಕ್ಷಕರ ಅವಶ್ಯಕತೆ ಹಾಗೂ ಜವಾಬ್ದಾರಿ ಜಾಸ್ತಿಯಿದೆ. ಬಡತನದ ಕಾರಣಕ್ಕಾಗಿ ಮುಸ್ಲಿಂ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿರುವುದು ಕಂಡು ಬರುತ್ತಿದೆ. ಶಿಕ್ಷಣದ ಜೊತೆ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠವನ್ನು ಹೇಳಿಕೊಡುವಂತೆ ಉರ್ದು ಶಿಕ್ಷಕರಿಗೆ ಕರೆ ನೀಡಿದರು.

ಕಷ್ಟ, ಅವಮಾನ, ಸಮಸ್ಯೆ, ಸವಾಲುಗಳನ್ನು ಸ್ವೀಕರಿಸಿದಾಗ ಮಾತ್ರ ಜೀವನದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಬಿಲ್ ಮತ್ತು ಬೆಲ್‍ಗಾಗಿ ಕೆಲಸ ಮಾಡಬೇಡಿ. ಸರ್ಕಾರ ಕೈತುಂಬಾ ಸಂಬಳ ಕೊಡುತ್ತಿದೆ. ನೀವು ಮಾಡುವ ಕೆಲಸದಿಂದ ಆತ್ಮತೃಪ್ತಿಯಾಗಬೇಕು ಎಂದು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಪತ್ ಮಾತನಾಡಿ ಭಾಷೆ ಕೇವಲ ಸಂವಹನಕ್ಕಾಗಿ ಅಲ್ಲ. ಸಂಸ್ಕøತಿಯನ್ನು ಪ್ರತಿಬಿಂಭಿಸುವ ಸಾಧನ. ಭಾಷೆ ಉಳಿಯಬೇಕಾದರೆ ಸಂಸ್ಕøತಿ ಉಳಿಯಬೇಕು. ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಿ ಆಧುನಿಕ ಜಗತ್ತಿಗೆ ಮುಂದಿನ ಪೀಳಿಗೆಯನ್ನು ತೋರಿಸಬೇಕಾಗಿರುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ಹೇಳಿದರು.

ಮುಸ್ಲಿಂ ಎಜುಕೇಷನಲ್ ಅಂಡ್ ಎಂಪವರ್‍ಮೆಂಟ್ ಟ್ರಸ್ಟ್ ಅಧ್ಯಕ್ಷ ನಿವೃತ್ತ ಡಿ.ವೈ.ಎಸ್ಪಿ. ಸೈಯದ್ ಇಸಾಖ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಡಿ.ವೈ.ಎಸ್ಪಿ.ಗಳಾದ ಅಬ್ದುಲ್ ರೆಹಮಾನ್, ಯೂಸೂಫ್, ನಿವೃತ್ತ ಪ್ರಾಚಾರ್ಯರಾದ ಮಹಮದ್ ಜಕಾವುಲ್ಲಾ ವೇದಿಕೆಯಲ್ಲಿದ್ದರು.

ಇ.ಸಿ.ಓ.ಸಮೀರ ಕಾರ್ಯಾಗಾರದಲ್ಲಿ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಉರ್ದು ಶಿಕ್ಷಕರಿಗೆ ಉಪನ್ಯಾಸ ನೀಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

BP : ಆಗಾಗ ನೀರು ಕುಡಿದರೆ ರಕ್ತದೊತ್ತಡ ಕಡಿಮೆಯಾಗುತ್ತಾ ?

ಸುದ್ದಿಒನ್ | ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದು ಹೃದಯ, ಮೆದುಳು, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಆರೋಗ್ಯದ ಮೇಲೆ

ಸಾರ್ವಜನಿಕ ಆಸ್ತಿ ಪಾಸ್ತಿಗಳ ಮೇಲೆ ವಕ್ಫ್ ಹಿಡಿತ ಸಾಧಿಸುವುದನ್ನು ತಡೆಯಬೇಕು : ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಆಗ್ರಹ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 03 : ರಾಜ್ಯದಾದ್ಯಂತ ವಕ್ಫ್ ಆಸ್ತಿ ಸಂಬಂಧಿಸಿದ ಗದ್ದಲಗಳು ಮಾರ್ದನಿಸಿದ್ದು ರೈತರು ಒಳಗೊಂಡಂತೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ

ಗೃಹಸ್ಥ ಜೀವನದಲ್ಲಿ ಆಧ್ಯಾತ್ಮದ ಅರಿವು ಅಗತ್ಯ : ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್

  ವರದಿ ಮತ್ತು ಫೋಟೋ ಕೃಪೆ ಶಿವಮೂರ್ತಿ.ಟಿ ಕೋಡಿಹಳ್ಳಿ, ಚಳ್ಳಕೆರೆ, ಫೋ : 97427 56304 ಸುದ್ದಿಒನ್, ಚಳ್ಳಕೆರೆ, ನವೆಂಬರ್. 03 : ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ದೀಪಾವಳಿ ಹಬ್ಬದ

error: Content is protected !!