ಬೆಂಗಳೂರಿನ ರೋಟರಿ ಸಂಸ್ಥೆಗಳಿಂದ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪಡೆದ ಶಿಕ್ಷಕ ಕೆ.ಟಿ. ನಾಗಭೂಷಣ್

1 Min Read

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.09 :  ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿಹಟ್ಟಿ ಯ ವಿಜ್ಞಾನ ಶಿಕ್ಷಕ ಕೆ. ಟಿ ನಾಗಭೂಷಣ್  ಅವರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಚಾಮರಾಜ ಪೇಟೆಯ ಅಭಿನವ್ ವಿಹಾರ ಭವನದಲ್ಲಿ ಅಕ್ಟೋಬರ್ 08 ರಂದು ನಡೆದ ಇಂಟರ್ ನ್ಯಾಷನಲ್ ರೋಟರಿಯ 20 ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಗಿದ್ದ ಇವರನ್ನು ಬೆಂಗಳೂರಿನ ರೋಟರಿ ಇಂಟರ್ ನ್ಯಾಷನಲ್  ಸಂಸ್ಥೆಯು ಇವರ ಪ್ರಾಮಾಣಿಕ ಹಾಗೂ ಸೃಜನಾತ್ಮಕ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ 2023 ನೇ ವರ್ಷದ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ MLC ಪುಟ್ಟಣ್ಣ ಹಾಗೂ ನಿವೃತ್ತ ಗವರ್ನರ್ ಆದ ಉದಯ ಕುಮಾರ್ ಭಾಸ್ಕರ್, ಶಿಕ್ಷಣ ಇಲಾಖೆಯ ಹಿರಿಯ ಕಾರ್ಯಕ್ರಮ ಅಧಿಕಾರಿ ಶ್ರಿ ರಮೇಶ್ ಸರ್ ಹಾಗೂ ಚಲನ ಚಿತ್ರ ನಟ ಜೆ.ಬಿ.ರೆಡ್ಡಿ ,ರೋಟರಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಂತಾದ ಗಣ್ಯರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.

ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದ ನಾಗಭೂಷಣ್ ರವರನ್ನು ಜಿಲ್ಲೆಯ ಉಪನಿರ್ದೇಶಕ  ರವಿಶಂಕರ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಯಾದು ನಾಯ್ಕ, ಶಾಲಾ ಸಿಬ್ಬಂದಿ, ಊರಿನ ಗ್ರಾಮಸ್ಥರು, ಯುವಕರು,ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *