Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುವ ಪೀಳಿಗೆ ಸಂಗೀತವನ್ನು ಆಸ್ವಾದಿಸುವ ಹವ್ಯಾಸ ರೂಢಿಸಿಕೊಳ್ಳುವಂತೆ ನರಸಿಂಹ ಕರೆ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552

ಚಿತ್ರದುರ್ಗ,(ಜು.23): ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸಂಗೀತವನ್ನು ಆಸ್ವಾದಿಸುವ ಹವ್ಯಾಸಿ ರೂಢಿಸಿಕೊಳ್ಳಬೇಕೆಂದು ಪೊಲೀಸ್ ಇಲಾಖೆ ಸೈಬರ್‌ ಕ್ರೈಂ ವಿಭಾಗದ ನರಸಿಂಹ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ರೋಟರಿ ಬಾಲಭವನದಲ್ಲಿ ಶುಕ್ರವಾರ ನಡೆದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಮನಸ್ಸು ಕಲುಷಿತಗೊಂಡಿದೆ. ಬದುಕಲು ಎಲ್ಲಾ ಅನುಕೂಲಗಳಿದ್ದರೂ. ಆತಂಕವಿದೆ. ಹಾಗಾಗಿ ಮನಸ್ಸಿಗೆ ನೆಮ್ಮದಿ, ಖುಷಿ ಸಿಗಬೇಕಾದರೆ ಸಂಗೀತ ಕೇಳಬೇಕು. ಸಂಗೀತ. ಜಾನಪದ ಮನುಷ್ಯನಿಗೆ ಚಿಕಿತ್ಸೆಯಿದ್ದಂತೆ. ಸರ್ಕಾರದ ಹಣವನ್ನು ಕೆಲವರು ಬಳಸಿಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ರೋಟರಿ ಸಂಸ್ಥೆಯವರು ಸ್ವಂತ ಹಣದಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಗುಣಗಾನ ಮಾಡಿದರು.

ಜಾನಪದ ಉತ್ಸವದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷ ರೊ.ಈ.ಅರುಣ್‌ಕುಮಾರ್ ಮಾತನಾಡುತ್ತ ಸಿನಿಮಾ ಹಾಡುಗಳಿಗೆ ಎಲ್ಲರೂ ಮಾರು ಹೋಗಿರುವುದರಿಂದ ಸಂಗೀತ, ಜಾನಪದ ಕಲೆ ಮರೆಯಾಗುತ್ತಿದೆ. ಅನೇಕ ಕಲಾ ಪ್ರಕಾರಗಳು, ಕಲಾವಿದರಿದ್ದಾರೆ. ಎಲ್ಲರನ್ನು ಪ್ರೋತ್ಸಾಹಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಜಾನಪದ ಹಾಡುಗಾರ ಕಾಲ್ಕೆರೆ ಚಂದ್ರಪ್ಪ ಮಾತನಾಡಿ ಎಲ್ಲಾ ಕಲೆಗಳಿಗೆ ಜಾನಪದ ಕಲೆ ತಾಯಿ ಬೇರಿದ್ದಂತೆ. ಗ್ರಾಮೀಣ ಭಾಗದಿಂದ ಹುಟ್ಟಿಕೊಂಡ ಜಾನಪದರ ಬದುಕು ಮತ್ತು ಸಮಸ್ಯೆಗಳನ್ನು ಆಲಿಸಬೇಕಿದೆ. ಜನಪದರ ಬದುಕಿನಲ್ಲಿ ಸಾಮರಸ್ಯ ಹೊಂದಾಣಿಕೆಯಿದೆ. ಗ್ರಾಮೀಣರ ಬದುಕೆ ಒಂದು ಜಾನಪದವಿದ್ದಂತೆ. ಮೂಲ ಸಂಗೀತಕ್ಕೆ ಇಳಿದಾಗ ಮಾತ್ರ ಜಾನಪದ ಪ್ರತಿಯೊಬ್ಬರಿಗೆ ಮನಸ್ಸಿಗೆ ತಲುಪಲು ಸಾಧ್ಯ.

ಸಂವಿಧಾನವನ್ನು ಹೇಗೆ ಪ್ರತಿಯೊಬ್ಬರು ಗೌರವಿಸುತ್ತಾರೋ ಅದೇ ರೀತಿ ಕಲೆ ಕಲಾವಿದರನ್ನು ಗೌರವದಿಂದ ಕಾಣಬೇಕು. ಸಂಗೀತದ ಕಲೆಯನ್ನು ಎಲ್ಲರೂ ರೂಢಿಸಿಕೊಂಡಾಗ ಆರೋಗ್ಯವಂತರಾಗಿರಬಹುದು. ಮಾನವ ಜನ್ಮ ಸಾರ್ಥಕವಾಗಬೇಕಾದರೆ ಕಲೆಯನ್ನು ಕಲಿತು ಆಸ್ವಾದಿಸಬೇಕು ಎಂದು ಸಲಹೆ ನೀಡಿದರು.

ಲಾಸಿಕಾ ಫೌಂಡೇಷನ್‌ನ ಕಾರ್ಯದರ್ಶಿ ಮಂಜುನಾಥ್ ಭಾಗವತ್ ಮಾತನಾಡುತ್ತ ಜಾನಪದ ಉತ್ಸವಗಳ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಕಲಾ ಪ್ರಕಾರ ಅತ್ಯವಶ್ಯಕ. ಮುಂದಿನ ಪೀಳಿಗೆಗೆ ಜಾನಪದ ಕಲೆಯನ್ನು ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.

ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ ಜಾನಪದ, ನಾಟಕ ಇವುಗಳಿಗೆಲ್ಲಾ ಸಂಗೀತ ಮೂಲ ಬೇರು. ನಾಜೂಕಿನ ಯುಗದಲ್ಲಿ ನಶಿಸಿ ಹೋಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡಬೇಕಿದೆ. ಬೇಸರದ ಮನಸ್ಸುಗಳಿಗೆ ಕಲಾವಿದರು ಸಂತೋಷ ಕೊಡುತ್ತಾರೆ. ಅದಕ್ಕಾಗಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ತಿಳಿಸಿದರು.

ಸಮಾಜ ಸೇವಕಿ ಗಾಯತ್ರಿ ಶಿವರಾಂ, ಜಾನಪದ ಹಾಡುಗಾರ ಎಂ.ಕೆ.ಹರೀಶ್ ಇವರುಗಳು ಜಾನಪದ ಉತ್ಸವ ಕುರಿತು ಮಾತನಾಡಿದರು.

ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿ ಶ್ರೀಮತಿ ಎನ್.ಓಂಕಾರಮ್ಮ, ರೋಟರಿ ಕ್ಲಬ್ ಚಿನ್ಮುಲಾದ್ರಿ ಕಾರ್ಯದರ್ಶಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು.
ಭರತನಾಟ್ಯ, ರಂಗ ಗೀತೆ, ವಯೋಲಿನ್ ವಾದನ, ಸುಗಮ ಸಂಗೀತ, ತತ್ವಪದ ಗಾಯನ, ಕನ್ನಡ ಗೀತ ಗಾಯನ, ಗೊರವರ ಕುಣಿತ, ವಚನ ಗಾಯನ, ಸೋಬಾನೆ ಪದ, ಜಾನಪದ ನೃತ್ಯ ಪ್ರದರ್ಶನಗೊಂಡಿತು.

ಜಾನಪದ ಹಾಡುಗಾರ ಅಮಕುಂದಿ ಗಂಗಾಧರ್ ಸ್ವಾಗತಿಸಿ ನಿರೂಪಿಸಿದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!