ಬೆಂಗಳೂರು: ಇಂದು ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಅಂಗವಾಗಿ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ, ಕೆಂಪೇಗೌಡರು ನಾವು ಈ ಕಾಲಮಾನ ಬುದ್ದ,ಬಸವ, ಅಂಬೇಡ್ಕರ್ ಓದಿಕೊಂಡು ಆದರ್ಶ ಗಳನ್ನ ಕಲಿತು ಬೆಳೆದಿದ್ದೇವೆ. ಕೆಂಪೇಗೌಡ, ಕನಸು ಅರ್ಥ ಮಾಡಿಕೊಂಡು ನನಸ್ಸು ಮಾಡಿದ್ದರು. ಅಂತಹ ಮಹಾನ್ ನಾಯಕ ಕೆಂಪೇಗೌಡ ಎಂದಿದ್ದಾರೆ.
ನಾವು ಬಿಎಸ್ವೈ ಕಾಲದಲ್ಲಿ ಕೇಳಿದ್ವಿ. ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಇಡಿ ಅಂತ. ಬಿಎಸ್ವೈ ಅವರು ಈಗಾಗಲೇ ಬಸವಣ್ಣವರನ್ನ ಪ್ರತಿಮೆ ಅನಾವರಣ ಮಾಡಲಾಗಿದೆ. ಇಬ್ಬರುದ್ದು ಬೇರೆ ಬೇರೆ ಚಿಂತನೆಗಳಲ್ಲ. ಕೆಂಪೇಗೌಡ ಸ್ಮರಣೆ ಮಾಡಿದ್ರೆ ಆ ರೀತಿ ವ್ಯಕ್ತಿಗಳ ನೆನೆದ ಹಾಗೆ. ನಾವು ಮುಂದಿನ ಪಿಳಿಗೆ ತಲುಪಿಸಬೇಕು. 1 ರಿಂದ ಪಿಜಿಯವರೆಗೂ ಒಂದು ತರಗತಿಯಲ್ಲಿ ಪಠ್ಯಕ್ರಮದಲ್ಲಿ ಕೆಂಪೇಗೌಡ ಪಾಠ ಇಡಬೇಕಿದೆ ಮನವಿ ಇದೆ. ಮೆಟ್ರೋ ನಮ್ಮ ಕೆಂಪೇಗೌಡ ಅಂತ ಇಡಬೇಕು ಮನವಿ ಇದೆ. ಮೆಜೆಸ್ಟಿಕ್ ಗೆ ಕೆಂಪೇಗೌಡ ಬಸ್ ನಿಲ್ದಾಣ ಅಂತ ಇದೆ. ಆದ್ರೆ ಯಾರು ಕರೆಯುವುದಿಲ್ಲ. ಹಾಗಾಗಿ ಅಲ್ಲಿ ಕೆಂಪೇಗೌಡ ಪುತ್ಥಳಿ ಸ್ಥಾಪಿಸಿ ಎಂದು ಸರ್ಕಾರಕ್ಕೆ ನಂಜಾವದೂತ ಮನವಿ ಮಾಡಿದ್ದಾರೆ.
ರಾಜ್ಯದ ನೀರಾವರಿ ವಿಚಾರಗಳಲ್ಲಿ ದೇವೇಗೌಡ ಬಿಟ್ಟೆ. ಸಿಎಂ ಬೊಮ್ಮಾಯಿ ಮಾತ್ರ ಬಲ್ಲರು ಎಂದು ಸಿಎಂ ಬೊಮ್ಮಾಯವರನ್ನ ದೇವೇಗೌಡರಿಗೆ ಹೋಲಿಸಿದ ನಂಜಾವದೂತ ಸ್ವಾಮೀಜಿ, ನೀರಾವರಿಗೆ ಕೊಡುಗೆ ಕೊಟ್ಟವರಲ್ಲಿ ಬಸವರಾಜ್ ಬೊಮ್ಮಾಯಿ ಒಬ್ಬರು. ದೇವೇಗೌಡರು ಬಿಟ್ಟರೇ ಕೆಲವು ರಾಜಕಾರಣಿ ಅಂದರೆ ಬೊಮ್ಮಾಯಿ ಅವ್ರು ಮಾತ್ರ.
ಅವ್ರು ನೀರಾವರಿ ಸಚಿವರಾಗಿದ್ದಾಗ ನೀರಾವರಿ ಬಗ್ಗೆ ಅಧ್ಯಯನ ಮಾಡಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನ ಮಾಡೇ ತೀರುವ ಭರವಸೆ ಸಿಎಂ ನೀಡಿದ್ದಾರೆ. ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ನಂತರ ಒಕ್ಕಲಿಗರ ಅಭಿವೃದ್ಧಿ ನಿಗಮ ಮಾಡಿದ್ದಾರೆ. ಆದರೆ ಆ ನಿಗಮ ಸರಿಯಾಗಿ ಟೀಕ್ ಆಫ್ ಆಗಿಲ್ಲ. ಹೀಗೆ ಸಿಎಂ ನೇತೃತ್ವದಲ್ಲಿ ಒಂದು ರಿವ್ಯೂ ಮೀಟಿಂಗ್ ಆಗಬೇಕು. ಮತ್ತೆ ಅಭಿವೃದ್ಧಿ ಗೆ ಸಂಬಂಧ ನಿಗಮದ ಅಧ್ಯಕ್ಷರಿಗೆ ನಿರ್ದೇಶನ ಕೊಡಬೇಕು.
ಮೊನ್ನೆ ೧೫೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಅದಕ್ಕೆ ಸ್ಪಷ್ಟ ರೂಪರೇಷೆ ಇನ್ನೂ ಕೂಡ ಬರಬೇಕು. ಕೆಂಪೇಗೌಡ ಹತ್ತಾರ ದೇವಾಲಯಗಳನ್ನು ಕಟ್ಟಿದ್ದಾರೆ. ಆ ದೇವಾಲಯ ಗಳೆಲ್ಲವೂ ಹೊಸ ರೂಪವಾಗಿ ಬರಬೇಕು. ನಿಗಮದ ಅಭಿವೃದ್ಧಿ ವೇಗವನ್ನು ಹೆಚ್ಚು ಮಾಡಬೇಕು. ಸಮುದಾಯದಲ್ಲಿ ದಿಕ್ಕು ತಪ್ಪಿಸುವ, ಹೊಡೆದಾಡುವ ಘಟನೆಗಳು ಆಗ್ತಿವೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಸಮುದಾಯದ ಉಪ ಜಾತಿಗಳ ಗೊಂದಲ ಸರಿಪಡಿಸಬೇಕು ಎಂದಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರವಾಗಿ ಮಾತನಾಡಿ, ಕುವೆಂಪು, ಅಂಬೇಡ್ಕರ್, ಬಸವೇಶ್ವರನಿಗೆ ಅವಮಾನ ಆಗ್ತಿದೆ. ಪಠ್ಯ ಪುಸ್ತಕ ಸಮಿತಿಗೆ ಯಾರನ್ನಾದರೂ ನೇಮಿಸುವಾಗ ಯೋಚನೆ ಮಾಡಿ ತೀರ್ಮಾನ ಮಾಡಬೇಕು. ಬಹಳ ವಿಶಾಲವಾದ ಅಧ್ಯಯನ ಮಾಡುವವರ ನೇಮಕ ಮಾಡಬೇಕು. ಲೆಫ್ಟ್ ರೈಟ್ ಇಲ್ಲದ, ಸ್ಟ್ರೈಟ್ ಮನಸ್ಥಿತಿ ಇರೋರನ್ನು ಸಮಿತಿಯ ಅಧ್ಯಕ್ಷರಾನ್ನಾಗಿ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ನಾಢಗೀತೆಗೆ ಅಪಮಾನ ಮಾಡಿದವರ ನೇಮಿಸಿದ್ದು ಸರಿಯಲ್ಲ ಎಂದು ಸಿಎಂ ಎದುರೇ ಸರ್ಕಾರದ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಸ್ವಾಮೀಜಿ.