ಬೆಂಗಳೂರು; ನಂದಿನಿ ಹಾಲಿನ ದರ ಪದೇ ಪದೇ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ತಲೆ ಬಿಸಿಯಾಗಿದೆ. ಒಮ್ಮೆ ಹಾಲನ್ನು ಹೆಚ್ಚು ಮಾಡಿ ದರವನ್ನು ಹೆಚ್ಚಳ ಮಾಡಿದ್ರು. ಈಗ ಮತ್ತೆ ದರ ಏರಿಕೆಗೆ ಸಚಿವ ಸಂಪುಟ ಅಸ್ತು ಎಂದಿದ್ದು, ಹಾಲನ್ನು ಖರೀದಸಬೇಕಾ..? ಬೇಡ್ವಾ ಎನ್ನುವ ಚಿಂತೆ ಗ್ರಾಹಕರದ್ದಾಗಿದೆ. ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಲು ಸಚುವ ಸಂಪುಟ ಒಪ್ಪಿಗೆ ನೀಡಿದೆ. ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಹತ್ತು ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಆದರೆ ಸಚಿವ ಸಂಪುಟದಲ್ಲಿ 4 ರೂಪಾಗಿ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ.

ಒಂದೇ ವರ್ಷದಲ್ಲಿ ಹಾಲಿನ ದರ ಎರಡು ಬಾರಿ ಏರಿಕೆಯಾದಂತೆ ಆಗಿದೆ. ಕಳೆದ ತಿಂಗಳು ಫೆಬ್ರವರಿಯಲ್ಲಷ್ಟೇ ಪ್ರತಿ ಲೀಟರ್ ಹಾಲಿನ ಬೆಲೆ 2 ರೂಪಾಯಿ ಏರಿಕೆಯಾಗಿತ್ತು. ಈಗ ನೋಡಿದ್ರೆ ನಾಲ್ಕು ರೂಪಾಯಿ ಏರಿಕೆಯಾಗಿದೆ. ರೈತರಿಂದ ಹಾಲಿನ ದರ ಹೆಚ್ಚಳದ ಮನವಿ ಬಂದಿದ್ದ ಕಾರಣ ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರ ಬಳಿ ದರ ಏರಿಕೆಗೆ ಮನವಿ ಮಾಡಿದ್ದವು.

ರೈತರು ಹಾಗೂ ಹಾಲು ಒಕ್ಕೂಟಗಳ ಒತ್ತಡದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಅಧಿವೇಶನ ಮುಗಿಯುತ್ತಿದ್ದಂತೆಯೇ ದರ ಏರಿಕೆ ಆಗಲಿದೆ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು. ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿರಲಿಲ್ಲ. ಬದಲಿಗೆ ದರ ಹೆಚ್ಚಳದ ಸಾಧಕ, ಭಾದಕಗಳ ಬಗ್ಗೆ ಚರ್ಚೆ ನಡೆದಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದರು. ಈಗ ಸಂಪುಟದ ಒಪ್ಪಿಗೆ ಪಡೆದು ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

