ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳವಾಗ್ತಾನೆ ಇದೆ. ಇದು ಗ್ರಾಹಕರಿಗೆ ದೊಡ್ಡ ತಲೆನೋವಾಗಿದೆ. ಹಾಲಿನ ದರ ಏರಿಕೆಯ ಪ್ರಸ್ತಾಪಕ್ಕೆ ಸಿಎಂ ಸಿದ್ದರಾಮಯ್ಯ ಸಂಪುಟ ಒಪ್ಒಇಗೆ ಸೂಚಿಸಿದೆ. ನಾಲ್ಕು ರೂಪಾಯಿ ಏರಿಕೆಯನ್ನು ಮಾಡಲಾಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈಗ ಏರಿಕೆ ಮಾಡಿರುವಂತ ಹಣ ರೈತರಿಗೆ ನೇರವಾಗಿ ಹೋಗುತ್ತದೆ ಎಂಬ ಮಾತು ಹೇಳಲಾಗಿದೆ. ಹಾಗಾದ್ರೆ ಈಗ ಏರಿಕೆಯಾಗಿರುವ ಬೆಲೆಯಲ್ಲಿ ರೈತರಿಗೆ ನೇರವಾಗಿ ಹೋಗುವುದು ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಕೋಲಾರ ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಪಡೆದಿರುವ ಜಿಲ್ಲೆ ಇದಾಗಿದೆ. ಕಿಒಲಾರ ಜಿಲ್ಲೆ ಹೈನ್ಯೋದ್ಯಮದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿಯೇ ಲಕ್ಷಾಂತರ ಕುಟುಂಬಗಳು ಹೈನ್ಯೋದ್ಯಮ ನಂಬಿ ಜೀವನ ನಡೆಸುತ್ತಿವೆ. ರೈತರಿಗೆ ಹಾಲಿಗೆ ನೀಡಬೇಕಿದ್ದ ಸಹಾಯಧನ ಬಿಡುಗಡೆ ಮಾಡಲು ಇಲ್ಲದ ಆಸಕ್ತಿ ಸರ್ಕಾರಕ್ಕೆ ಹಾಲಿನ ದರ ಏರಿಕೆಯಲ್ಲಿ ಇದೆ ಎಂಬುದು ರೈತರು ಹಾಗೂ ಗ್ರಾಹಕರ ಆರೋಪವಾಗಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಕೋಲಾರ ಹಾಲು ಒಕ್ಕೂಟ ಕಳೆದ ಒಂದು ವಾರದ ಹಿಂದೆ ರೈತರಿಗೆ ಎರಡು ರೂಪಾಯಿ ಹಾಲಿನ ಖರೀದಿ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರುಗೆ 32.20 ಸಿಗುತ್ತಿದೆ. ಈಗ ಹಾಲಿನ ದರ 4 ರೂಪಾಯಿ ಏರಿಕೆ ಮಾಡಿದ್ದು, ಈ ದರವನ್ನು ನೇರವಾಗಿ ರೈತರಿಗೆ ಕೊಟ್ಟರು ರೈತರಿಗೆ ಲೀಟರ್ ಹಾಲಿಗೆ ಸಿಗುವುದು ಕೇವಲ 36.20 ರೂಪಾಯಿ. ಆದರೆ ಗ್ರಾಹಕರಿಗೆ ಮಾರಾಟ ಮಾಡುವುದು 64 ರೂಪಾಯಿ. ಹಾಗಾಗಿ ಸರ್ಕಾರ ಒಂದು ಲೀಟರ್ ಹಾಲಿನ ಮೇಲೆ 30 ರೂಪಾಯಿ ಲಾಭ ಪಡೆಯುತ್ತದೆ ಎಂಬುದು ಹಾಲು ಉತ್ಪಾದಕರ ಅಭಿಪ್ರಾಯವಾಗಿದೆ.

