ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮಾ.31): ನಗರದ ಜೆ.ಎಂ.ಐ.ಟಿ. ಕಾಲೇಜು ಸಮೀಪವಿರುವ ನಮ್ಮ ಎಕ್ಸ್‌ಪರ್ಟ್ ಪಿ.ಯು. ಕಾಲೇಜಿಗೆ ಪ್ರಥಮ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ.
ಪಿ.ಸಿ.ಎಂ.ಸಿ. ವಿಭಾಗದಲ್ಲಿ ನಾಗಶ್ರೀ ಎಂ.ಗೌಡರ್ ಆರು ನೂರಕ್ಕೆ 595 ಅಂಕಗಳನ್ನು ಪಡೆದಿದ್ದು, ಪಿ.ಸಿ.ಎಂ.ಬಿ. ವಿಭಾಗದಿಂದ ನವ್ಯ, ಸಂಗೀತ, ನಿದಾ ಕೌಸರ್ ಇವರುಗಳು 595 ಅಂಕಗಳನ್ನು ಗಳಿಸಿದ್ದಾರೆ.
ಅನುಷ ಆರುನೂರಕ್ಕೆ 593 ಅಂಕ ಪಡೆದು ಟಾಪರ್ ಗಳಾಗಿ ಕಾಲೇಜು ಹಾಗೂ ಪೋಷಕರುಗಳಿಗೆ ಕೀರ್ತಿ ತಂದಿದ್ದಾರೆ.
ಶೇ.80 ರಷ್ಟು ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಶೇ.91 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಕಾಲೇಜಿನ ಪ್ರಾಚಾರ್ಯರಾದ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪರ್ ಗಳಾದ ಐದು ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಅಭಿನಂದಿಸಲಾಯಿತು.
GIPHY App Key not set. Please check settings