ಬೆಂಗಳೂರು; ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಈಗ ಬರ್ತಾ ಇರುವಂತ ಮಾಹಿತಿಯನ್ನ ನೋಡೋದಾದ್ರೆ ರನ್ಯಾ ರಾವ್ ಅವರ ಹಿಂದೆ ಅನೇಕ ಘಟಾನುಘಟಿಗಳು ಇದ್ದಾರೆ ಎಂಬ ಅಂಶ ಹೊರಗೆ ಬರ್ತಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ರನ್ಯಾ ರಾವ್ ಅವರು ಕಳೆದ ಕೆಲವು ತಿಂಗಳಲ್ಲಿ ಮೂವತ್ತಕ್ಕೂ ಹೆಚ್ಚು ಸಲ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಸಂಪೂರ್ಣವಾದ ಪ್ರೋಟೋಕಾಲ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರೇ ಎಸ್ಕಾರ್ಟ್ ಮಾಡಿ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗ್ತಾ ಇದ್ರು. ಅಂದ್ರೆ ಆಕೆ ಸಾಮಾನ್ಯ ಮಹಿಳೆಯಲ್ಲ ಅನ್ನೋದು ಇದರಲ್ಲಿಯೇ ಅರ್ಥವಾಗುತ್ತದೆ. ಏರ್ಪೋರ್ಟ್ ನಲ್ಲಿಯೇ ಚೆಕ್ ಮಾಡಲ್ಲ ಎಂದಾಗ ಇದರ ಹಿಂದೆ ಘಟಾನುಘಟಿ ಸಚಿವರಿದ್ದಾರೆ ಎಂಬ ಮಾಹಿತಿ ಹೊರಗೆ ಬರ್ತಾ ಇದೆ.

ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲ ಮಾಡ್ತ ಇಲ್ಲ. ನಾನೊಬ್ಬ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡ್ತಾ ಇಲ್ಲ. ಅದರ ಹಿಂದೆ ಯಾವ ಸಚಿವರಿದ್ದಾರೆ ಅನ್ನೋದನ್ನ ತಿಳಿಸಬೇಕು. ಇಂಥ ವ್ಯಕ್ತಿಗಳಿಗೆ ಬೆಂಬಲ ನೀಡಿರುವ ರಾಜಕಾರಣಿಗಳು ಯಾರು ಎಂಬುದು ಮುಖ್ಯಮಂತ್ರಿ ಗಮನಕ್ಕೆ ಬಂದಿದ್ದರೆ, ಅವರು ಆದಷ್ಟು ಬೇಗ ಬಹಿರಂಗ ಪಡಿಸಬೇಕೆಂದು ಆಗ್ರಹ ಮಾಡುತ್ತೇವೆ. ಇದೊಂದು ಗಂಭೀರವಾದ ಪ್ರಕರಣ ಆಗಿರೋ ಕಾರಣ ಯಾರ್ಯಾರ ಕೈವಾಡವಿದೆ ಎಂಬುದನ್ನು ತಿಳಿಸಬೇಕು. ಗೋಲ್ಡ್ ಸ್ಮಗ್ಲಿಂಗ್ ಮಾಫಿಯಾ, ಹವಾಲಾ ಹೀಗೆ ಹಲವು ವಿಚಾರಗಳಿಗೆ ಬೆಂಬಲ ನೀಡಿದವರ ಹೆಸರನ್ನ ಬಹಿರಂಗ ಪಡಿಸಲೇ ಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.

