Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಪಿರಿಟ್ ಗೇಮ್ ಆಡಲು ಹೋಗಿ ದೆವ್ವದ ಪ್ರೀತಿಯಲ್ಲಿ ಕಳೆದು ಹೋಗುವ ಹುಡುಗನ ಕಥೆ ನಮಸ್ತೆ ಗೋಸ್ಟ್

Facebook
Twitter
Telegram
WhatsApp

ಗಾಂಧಿನಗರದಲ್ಲಿ ಹೊಸಬರ ಎಂಟ್ರಿ ಆಗ್ತಾನೆ ಇರುತ್ತೆ. ಇದೀಗ ಭರತ್ ನಂದ ಎಂಬಹೊಸ ಪ್ರತಿಭೆ ನಮಸ್ತೆ ಗೋಸ್ಟ್ ಮೂಲಕ‌ ಅನಾವರಣವಾಗಿದ್ದಾರೆ. ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅದೇ ನಮಸ್ತೆ ಗೋಸ್ಟ್ ಸಿನಿಮಾ.

ಸಿನಿಮಾ ಹೇಗಿದೆ..? ಯಾಕೆ ನೋಡಬೇಕು ಎಂಬ ಸಣ್ಣ ಅಭಿಪ್ರಾಯ ಇಲ್ಲಿದೆ. ಹಳ್ಳಿಯಲ್ಲಿ ಹೆಂಗೆ ಬೇಕೋ ಜೀವನ ಕಳೆಯುತ್ತಿದ್ದ ಹುಡುಗ ಶಿವು. ಅದೇ ಊರಿಗೆ ಬರುವ ಆಶಾಗೆ ಅವನ ಒಳ್ಳೆಯತನದ ಮೇಲೆ ಲವ್ವಾಗುತ್ತೆ. ಹೇಳದೆ, ಕೇಳದೆ ಮನಸ್ಸಲ್ಲೇ ಪ್ರೀತಿಯ ಗೋಪುರ ಕಟ್ಟಿಕೊಳ್ಳುತ್ತಾಳೆ. ಅಪ್ಒ ಮಗನಿಗೆ ಜಗಳವಾಗಿ ಶಿವು ಊರು ಬಿಟ್ಟು ಹೋಗುವಾಗ, ಅವನ ಹಿಂದೆಯೇ ಓಡುವ ಆಶಾ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪುತ್ತಾಳೆ.

ಇಷ್ಟು ಕಥೆ ನಿಮಗೆ ಫಸ್ಟ್ ಆಫ್ ಅಲ್ಲ. ಇದು ಸೆಕೆಂಡ್ ಆಫ್ ನಲ್ಲಿ ಬರುವ ಮನಕಲುಕುವ ಕಥೆ. ಆದ್ರೆ ಇದೇ ಕಥೆ ನಾಯಕನನ್ನ ಮೊದಲಿಂದ ಕನಸಾಗಿ ಕಾಡುತ್ತೆ. ಆ ಆಕ್ಸಿಡೆಂಟ್ ಆದ ಆಶಾ ಮತ್ತೆ ಸಿಕ್ತಾಳೆ, ದೆವ್ವದ ಜೊತೆಗೆ ಪ್ರೀತಿ ಆಗುತ್ತೆ, ದೆವ್ವದ ಜೊತೆಗೆ ಜೀವನ ಮಾಡಲು ನಿರ್ಧರಿಸುತ್ತಾನೆ. ಆಮೇಲೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಹೋಗುತ್ತೆ. ಆ ಕಥೆಯ ಸ್ವಾದ ಪಡೆಯಬೇಕು ಅಂದ್ರೆ ಒಮ್ಮೆ ನಮಸ್ತೆ ಗೋಸ್ಟ್ ನೋಡಲೇಬೇಕು.

ಆ ದೆವ್ವ ಶಿವು ಮನೆಗೆ ಬಂದಿದ್ದೇಗೆ, ಶಿವು ಹಿಂದೆ ಬಿದ್ದಿದ್ದು ಯಾಕೆ, ಪ್ರಾಣ ಕೇಳಿದ್ದು ಯಾಕೆ, ಹಳೆ ಕಥೆ ಏನು, ಮುಂದೆ ಜೀವನ ಹೇಗೆ ಮಾಡ್ತಾನೆ, ಆ ದೆವ್ವದ ಜೊತೆಗೆ ಪ್ರೀತಿ ಹೇಗೆ ಮುಂದುವರೆಯುತ್ತೆ. ಈ‌ ಎಲ್ಲಾ ಕುತೂಹಲಕ್ಕೂ ಬ್ರೇಕ್ ಹಾಕೋದು ಸಿನಿಮಾದ ಗಟ್ಟಿ, ರೋಮ್ಯಾಂಟಿಕ್ ಕಥೆ.

ಹಾಡುಗಳು ಅದ್ಭುತವಾಗಿ‌ ಮೂಡಿ ಬಂದಿದೆ. ಎಲ್ಲೂ ನಾಯಕನಟನನ್ನು ಬಿಲ್ಡಪ್ ರೀತಿ ತೋರಿಸಿಲ್ಲ. ಒಬ್ಬ ಹಳ್ಳಿ ಹುಡುಗ, ಜವಬ್ದಾರಿ ಇಲ್ಲದೆ ಇರುವ ಹುಡಿಗ ಹೇಗಿರ್ತಾನೆ ಅಷ್ಟು ನ್ಯಾಚುರಲ್ ಆಗಿ ತೋರಿಸಲಾಗಿದೆ. ದೆವ್ವ ಅಂದ್ರೆ ಏನು ಎಂಬ ರಿಯಲ್ ಭಯವನ್ನು ಫೀಲ್ ಮಾಡಿಸಿದ್ದಾರೆ. ಸಹಜ ಕಾಮಿಡಿಯಿಂದ ಬಾಯ್ತುಂಬ ನಗುವಂತೆ ಮಾಡಿದ್ದಾರೆ.

ಭರತ್ ನಂದ ನಟಿಸಿ, ನಿರ್ದೇಶನ ಮಾಡಿದ್ದು, ವಿಧ್ಯಾ ರಾಜ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲ ರಾಜ್ವಾಡಿ, ಶಿವಕುಮಾರ್ ಆರಾಧ್ಯ, ಹರೀಶ್ ಶಿವಮೊಗ್ಗ ಮೊದಲಾದವರು ತಾರಾಬಳಗದಲ್ಲಿದ್ದಾರೆ. ರಮೇಶ್ ಕುಮಾರ್ ಎನ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲು : ಬೆದರಿಕೆ ಹಾಕಿದ್ದಾರೆಂದು ಕಂಪ್ಲೈಂಟ್ ಕೊಟ್ಟ ಎಡಿಜಿಪಿ..!

    ಕಳೆದ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ನಡುವೆ ಮಾತಿನ ಯುದ್ಧ, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು. ಇದೀಗ ಎಡಿಜಿಪಿ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

DCP ಆಗಿ ಅಧಿಕಾರ ವಹಿಸಿಕೊಂಡ RCB ಸ್ಟಾರ್ ಕ್ರಿಕೆಟರ್ : ಸಿರಾಜ್ ಸಂಬಳ ಎಷ್ಟು ಗೊತ್ತಾ..?

ಟೀಂ ಇಂಡಿಯಾದ ಸ್ಟಾರ್ ವೇಗಿ ಎಂದೇ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಇದೀಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಸಿರಾಜ್ ಗೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಸದ್ಯ ಮೊಹಮ್ಮದ್ ಸಿರಾಜ್ ತೆಲಂಗಾಣದ ಡೆಪ್ಯೂಟಿ

ದರ್ಶನ್ ಹೊರ ಬರುವ ಸುಳಿವು ಕೊಟ್ರಾ ವಿಜಯಲಕ್ಷ್ಮೀ: ಅಭಿಮಾನಿಗಳಿಗೆ ಹೇಳಿದ್ದೇನು..?

  ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ಫ್ಯಾಮಿಲಿ, ಫ್ರೆಂಡ್ಸ್, ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ನಮ್ಮ ಡಿ ಬಾಸ್ ಯಾವಾಗ ಬರ್ತಾರೆ ಅಂತ ಕಾಯ್ತಿದ್ದಾರೆ. ದಸರಾಗಾದರೂ

error: Content is protected !!