ಬೆಂಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಈಗ ಭ್ರಷ್ಟಾಚಾರದ ಆರೋಪ ಓಡಾಡುತ್ತಿದೆ. ಹಣ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆ. ಇದೀಗ ಅದಕ್ಕೆಲ್ಲಾ ನಲಪಾಡ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂಡಿಯನ್ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಬಿ ವಿ ಶ್ರೀನಿವಾಸ್ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ದೂರು ಹೈಕಮಾಂಡ್ ತನಕ ಹೋಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ನಡುವೆ ನಲಪಾಡ್ ಈ ಬಗ್ಗೆ ಮಾತನಾಡಿದ್ದಾರೆ. ಆ ಸಂಬಂಧ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಲಪಾಡ್ , ಬಿ ವಿ ಶ್ರೀನಿವಾಸ್ ಪರವಾಗಿ ಮಾತನಾಡಿದ್ದಾರೆ.
ನಾನಾಗಲೀ, ರಕ್ಷಾ ರಾಮಯ್ಯ ಅವರಾಗಲಿ, ಅಧ್ಯಕ್ಷರಾಗಲು ಬಿ ವಿ ಶ್ರೀನಿವಾಸ್ ಅವರಿಗೆ ಹಣ ನೀಡಿಲ್ಲ. ಈಗ ಹರಿದಾಡುತ್ತಿರುವ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಇದೊಂದು ರಾಜಕೀಯ ಉದ್ದೇಶ. ರಾಜಕೀಯವಾಗಿ ಅವರ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ ಎಂದಿದ್ದಾರೆ.