ಬೆಂಗಳೂರು: ಮುಳುಬಾಗಿಲು ಶಾಸಕ ಎಚ್ ನಾಗೇಶ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಭಾರೀ ಕುತೂಹಲ ಕೆರಳಿಸಿದೆ. ಆ ಬಗ್ಗೆ ಮಾತನಾಡಿದ ಹೆಚ್ ನಾಗೇಶ್, ನಮ್ಮ ಸಂಬಂಧಿಕರೊದೊಂದು ಕೆಲಸ ಇತ್ತು. ಅದಕ್ಕೆ ಇಲ್ಲಿಗೆ ಬಂದೆ. ಆದರೆ ಸಾಹೇಬರು ಮನೆಯಲ್ಲಿಲ್ಲ. ಅವರನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದೆ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿರುವವರು ಅಲ್ಲಿಗೆ ಬರುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾಗೇಶ್ ಅವರು, ನಾನು ಸ್ವತಂತ್ರ ಅಭ್ಯರ್ಥಿ ನಾನ್ಯಾಕೆ ಆ ರೀತಿ ಮಾಡಲಿ. ಇನ್ನು ಒಂದು ವರ್ಷ ಇದೆ. ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಅದೆಲ್ಲಾ ಈಗ ಸಾಧ್ಯವಿಲ್ಲ ಎಂದಿದ್ದಾರೆ.
ಚುನಾವಣೆಯನ್ನು ಯಾವ ಪಕ್ಷದಿಂದ ಎದುರಿಸಬೇಕೆಂಬುದನ್ನು ನಮ್ಮ ಕ್ಷೇತ್ರದ ಮುಖಂಡರನ್ನು ಭೇಟಿ ಮಾಡಿ, ಈಗಾಗಲೇ ಆ ಬಗ್ಗೆ ಮಾತನಾಡಿದ್ದೀನಿ. ಮತ್ತೆ ಒಮ್ಮೆ ನಮ್ಮ ಮುಖಂಡರನ್ನು ಭೇಟಿ ಮಾಡಿ, ಅವರು ಏನು ಹೇಳುತ್ತಾರೆ ಆ ಪ್ರಕಾರವೇ ನಾನು ನಡೆಯುತ್ತೇನೆ ಎಂದಿದ್ದಾರೆ.
ನನ್ನ ಚೇರ್ಮನ್ ಕೂಡ ಮಾಡಿದೆ ಬಿಜೆಪಿ ಹೀಗಾಗಿ ಅವರಿಗೆ ಕೃತಜ್ಞನಾಗಿರಬೇಕಲ್ಲವಾ..? ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ ಮಾನ ಕೊಡುತ್ತೀವಿ ಎಂದಿದ್ದಾರೆ. ಇಲ್ಲಿವರೆಗೆ ತೆಗೆದುಕೊಂಡಿಲ್ಲ. ಮುಂದೊಂದು ದಿನ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ. ಕಳೆದ ಬಾರಿಯೇ ಹೇಳಿದ್ದರು. ಈಗ ಸಮಯ ಕೂಡಿ ಬಂದಿದೆ. ಏನು ಮಾಡ್ತಾರೆ ಎಂಬುದನ್ನು ಕಾದು ನೋಡುತ್ತೇನೆ ಎಂದಿದ್ದಾರೆ.