ಮಾಡುವ ಪಾತ್ರದಿಂದ ಕುಟುಂಬದ ಪ್ರತಿಷ್ಠೆ ಹಾಳಾಗಬಾರದು : ನಾಗಚೈತನ್ಯ ಮಾತು ಸಮಂತಾಗೆ ಹೇಳಿದ್ದಾ..?

1 Min Read

ಹೈದರಾಬಾದ್ : ಟಾಲಿವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಸಮಂತಾ-ನಾಗಚೈತನ್ಯ ಕೂಡ ಒಂದಾಗಿತ್ತು. ಹತ್ತು ವರ್ಷಗಳ ಸ್ನೇಹ ಸಂಬಂಧಕ್ಕೆ ಮದುವೆಯಾದ ಮೂರು ಮುಕ್ಕಾಲು ವರ್ಷಕ್ಕೆ ದಾಂಪತ್ಯ ಜೀವನ ಮುರಿದು ಬಿತ್ತು. ಆದ್ರೆ ಇಲ್ಲಿವರೆಗೂ ಅಕ್ಕಿನೇನಿ ಕುಟುಂಬದವರೇ ಆಗಲಿ, ಸಮಂತಾ ಆಗಲಿ ಡಿವೋರ್ಸ್ ತೆಗೆದುಕೊಂಡ ವಿಚಾರವನ್ನ ಬಹಿರಂಗಪಡಿಸಿಲ್ಲ.

ಇತ್ತೀಚೆಗೆ ಸಮಂತಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸೋದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಎನಿಸುವ ಪಾತ್ರವದು. ಆದ್ರೆ ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದೇ ಹೇಳಲಾಗಿದೆ. ಡಿವೋರ್ಸ್ ಪಡೆಯೋದಕ್ಕೆ ಇದು ಕೂಡ ಒಂದು ಕಾರಣ ಎನ್ನಲಾಗಿದೆ‌.

ಇಷ್ಟು ದಿನ ಮೌನವಾಗಿದ್ದ ನಾಗಚೈತನ್ಯ ಇದೀಗ ಸಂದರ್ಶನವೊಂದರಲ್ಲಿ ಹೇಳಿರುವ ವಿಚಾರ, ಗಾಳಿಸ ಉದ್ದಿಗೆ ಪುಷ್ಟಿ ನೀಡುವಂತಿದೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ, ನಿಮ್ಮ ಪಾತ್ರಗಳ ಆಯ್ಕೆ ಬಗ್ಗೆ ಹೇಳಿ ಎಂದಾಗ, ನಾಗಚೈತನ್ಯ ಅವರು, ನಾನು ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತೇನೆ. ಆದ್ರೆ ಕುಟುಂಬದವರಿಗೆ ನನ್ನ ಪಾತ್ರದಿಂದ ಮುಜುಗರವಾಗಬಾರದು. ಹಾಗೇ ನನ್ನ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ಬರಬಾರದು. ಅಂತ ಪಾತ್ರಗಳನ್ನ ಮಾಡೀದಕ್ಕೆ ಹೋಗಲ್ಲ ಎಂದಿದ್ದಾರೆ.

ಈ ಮಾತನ್ನು ಕೇಳಿದ ನೆಟ್ಟಿಗರು, ಇದು ಸಮಂತಾ ಅವರಿಗೆ ಹೇಳಿರುವ ಮಾತು ಇರಬಹುದು ಎನ್ನುತ್ತಿದ್ದಾರೆ. ಅದರಂತೆ ಸಮಂತಾ ಇತ್ತಿಚೆಗೆ ಪುಷ್ಪಾ ಸಿನಿಮಾದಲ್ಲಿ ಅಷ್ಟೇ ಬೋಲ್ಡ್ ಆಗಿ ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *