Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮರ್ಥ ಆಡಳಿತಗಾರ ಹಾಗೂ ದೂರದೃಷ್ಠಿ ನಾಯಕ ನಾಡಪ್ರಭು ಕೆಂಪೇಗೌಡ :  ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜೂನ್.27) : ನಾಡಪ್ರಭು ಕೆಂಪೇಗೌಡರು ಅಪೂರ್ವ ಕನಸುಗಾರ, ಸಮರ್ಥ ಆಡಳಿತಗಾರ ಹಾಗೂ ದೂದೃಷ್ಠಿವುಳ್ಳ ನಾಯಕರಾಗಿದ್ದರು.

ಬೆಂಗಳೂರು ಸುತ್ತಮುತ್ತ ಕೃಷಿಗೆ ಆದ್ಯತೆ ನೀಡಿ, ಹಲವಾರು ಐತಿಹಾಸಿಕ ಕೆರೆ ಕಟ್ಟೆಗಳನ್ನು ನಿರ್ಮಿಸಿದರು. ಬೆಂಗಳೂರು ನಗರದಲ್ಲಿ ವ್ಯಾಪಾರ ವಹಿವಾಟಿನ ಅಭಿವೃದ್ಧಿಗೂ ಶ್ರಮಿಸಿದರು ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಸ್ವಯಂ ಸಾಮಾಥ್ರ್ಯದ ಮೂಲಕವಾಗಿ ಸರ್ವ ಧರ್ಮಗಳ, ಸರ್ವ ಸಮುದಾಯ ಒಳಗೊಳ್ಳುವ ಜೊತೆಗೆ ಎಲ್ಲ ವೃತ್ತಿಗಳಿಗೂ ಆದ್ಯತೆ ಕೊಡುವ ಪರಿಕಲ್ಪನೆಯೊಂದಿಗೆ ನಾಡನ್ನು ಕಟ್ಟಿದರು ಎಂದು ತಿಳಿಸಿದರು.

ದೂರದೃಷ್ಠಿಯೊಂದಿಗೆ ಮೂಲ ಸೌಕರ್ಯ ಹಾಗೂ ಸವಲತ್ತು ಹೊಂದಿರುವ ನಗರ ನಿರ್ಮಾಣದ ಕನಸು ಹೊಂದಿದ್ದ ಕೆಂಪೇಗೌಡರು, ಬೆಂಗಳೂರು ನಗರ ನಾಲ್ಕು ದಿಕ್ಕಿನಲ್ಲೂ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿದರು. ಇದರೊಂದಿಗೆ ನಗರದ ಸುತ್ತಲೂ ಮಣ್ಣಿನ ಗೋಡೆವುಳ್ಳ ಕೋಟೆ, ಕಿರಿದ್ವಾರಗಳನ್ನು ನಿರ್ಮಿಸಿದರು. ನಗರದಲ್ಲಿ ನೀರಿನ ಕೊರತೆ ಉಂಟಾಗದಂತೆ, ಕೆರೆ ಕಟ್ಟೆ ಕಲ್ಯಾಣಿಗಳನ್ನು ಹಾಗೂ ದೇವಾಲಯಗಳನ್ನು ಕಟ್ಟಿದರು. ಕೆರೆಗಳ ಆಶ್ರಯದಲ್ಲಿ ಕೃಷಿಗೆ ವಿಶೇಷವಾದ ನೆರವು ಹಾಗೂ ಸಹಕಾರವನ್ನೂ ಕೊಟ್ಟರು.  ಇದಕ್ಕೆ ಸಂಬಂಧಿಸಿದ ಗುಡಿ ಕೈಗಾರಿಕೆಗಳ ಅಭಿವೃದ್ಧಿ, ವೃತ್ತಿ ಹಾಗೂ ಕಸುಬುಗಳ ವ್ಯಾಪಾರಕ್ಕೆ ಅನುವಾಗುವ ನಿಟ್ಟಿನಲ್ಲಿ  ಹಲವು ಪೇಟೆಗಳನ್ನು ನಿರ್ಮಿಸಿದರು ಎಂದು ಹೇಳಿದರು.

ಬೆಂಗಳೂರು ಜಾಗತಿಕ ಮಟ್ಟದದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ. ವಿಶ್ವಮಟ್ಟದಲ್ಲಿ ವ್ಯಾಪಾರ ಕೇಂದ್ರವಾಗಿದೆ. ಐಟಿ ಬಿಟಿ ಕೇಂದ್ರದ ಜೊತೆಗೆ ಎಲ್ಲ ರೀತಿಯ ವೃತ್ತಿ, ಕಸಬು, ಯಾವುದೇ ರೀತಿಯ ಕ್ರಿಯಾಶೀಲವಾದ ಶಕ್ತಿಗೆ ಅನುವು ಮಾಡಿಕೊಡುವ ರೀತಿಯಲ್ಲಿ ನಾಡು ಬೆಂಗಳೂರು ರೂಪಿತಗೊಂಡಿದೆ. ಇಂತಹ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಧೀರೋತ್ತರ ನಾಯಕ ಎಂದು ಹೇಳಿದರು.

ಮಹಾನ್ ವ್ಯಕ್ತಿತ್ವದ ಕೆಂಪೇಗೌಡರ ಬಗ್ಗೆ ಇಂದಿನ ಯುವ ಜನತೆ ತಿಳಿದುಕೊಳ್ಳಬೇಕು. ಸಾಧಕರು, ದಾರ್ಶನಿಕರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಕೆಂಪೇಗೌಡರ ನಿರ್ಮಿಸಿದ ಬೆಂಗಳೂರು ಇಂದು ಅಷ್ಟದಿಕ್ಕುಗಳಲ್ಲಿಯೂ ಬೆಳೆಯುತ್ತಿದೆ. ಬೆಂಗಳೂರಿನ ಆರ್ಥಿಕ ಸಂಪೂನ್ಮೂಲ ನಮ್ಮ ರಾಜ್ಯದ ಸರ್ವ ಅಭಿವೃದ್ಧಿಗೆ ಹೆಚ್ಚು ಕಡಿಮೆ ಅರ್ಧಕ್ಕಿಂತ ಹೆಚ್ಚು ಆರ್ಥಿಕ ಸಂಪನ್ಮೂಲ ಒದಗಿಸುವ ಕೊಡುವ ರೀತಿಯ ಸರ್ವಶಕ್ತಿಯನ್ನು ಬೆಂಗಳೂರು ಹೊಂದಿದೆ ಅಭಿಪ್ರಾಯಪಟ್ಟರು.

ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ಮನವಿ: ಜನಾಂಗದ ಬಹುದಿನಗಳ ಕನಸಾಗಿರುವ ಹಾಗೂ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್‍ಗೇಟ್ (ಬೈಪಾಸ್ ಹತ್ತಿರ) ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸುವಂತೆ ಜಿಲ್ಲಾ ಒಕ್ಕಲಿಗರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ನಗರಸಭೆ ವ್ಯವಸ್ಥಾಪಕಿ ಮಂಜುಳಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಪ್ರಧಾನ ಕಾರ್ಯದರ್ಶಿ ಎಸ್.ಜಗನ್ನಾಥ್, ಮಾಜಿ ಅಧ್ಯಕ್ಷ ಜಿ.ಹನುಮಂತಪ್ಪ, ಗೌರವಾಧ್ಯಕ್ಷ ಪ್ರೊ.ಎಸ್.ಈರಣ್ಣ, ನಿರ್ದೇಶಕರಾದ ರಂಗದ್ಯಾಮಯ್ಯ, ಜಿ.ದ್ಯಾಮಪ್ಪ, ಆರ್.ಪರಮೇಶ್ವರ್, ಎಂ.ಡಿ.ಕುಮಾರ್, ಆರ್.ಚಿದಾನಂದಪ್ಪ, ಜಿ.ಎಂ.ಹನುಮಂತಪ್ಪ, ಚೇತನ್, ಆರ್.ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಹೊಸದುರ್ಗದ ಮೂರ್ತಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!