ನಾಡಪ್ರಭು ಎಂದು ಯಾರಿಗೂ ಹೇಳಲ್ಲ, ಅವರಿಬ್ಬರಿಗೆ ಮಾತ್ರ : ಸಿಎಂ ಬೊಮ್ಮಾಯಿ

suddionenews
1 Min Read

ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರ ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ನಾಡಿನ ಜನತೆಗೆ ಕೆಂಪೇಗೌಡ ಜಯಂತಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಲವಾರು ಇತಿಹಾಸ ಸೃಷ್ಟಿ ಮಾಡಿರುವ ನಾಯಕರು ಬಗ್ಗೆ ಮಾತಾಡ್ತೇವೆ. ನಾಡಪ್ರಭು ಎಂದು ಯಾರಿಗೂ ಹೇಳಲ್ಲ. ನಾಡಿನ ಸಮಗ್ರವಾದ ಚಿಂತನೆ. ಪ್ರತಿಯೊಬ್ಬರ ಬದುಕಿನಲ್ಲಿ ಕೊಡುಗೆ ಕೊಡುವುರು ಮಾತ್ರ ನಾಡಪ್ರಭು. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯ ಒಂದು ಒಕ್ಕೂಟದ ವ್ಯವಸ್ಥೆ. ಬಹಳಷ್ಟು ಜನ‌ ಯುದ್ಧ ಆಳ್ವಿಕೆ ಮಾಡಿದ್ರು. ನಾಡನ್ನ ಕಟ್ಟುವ ಬಹಳ ಅಪರೂಪ. ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ. ಸಮಗ್ರವಾಗಿ ಸಮಾಜವನ್ನ ಚಲನಶೀಲವಾಗಿ ಮಾಡಿದ್ದನ್ನ ನಾವು ವಿಜಯನಗರ ಸಾಮ್ರಾಜ್ಯದಲ್ಲಿ ನೋಡಿದ್ದೀವಿ.

ಸಾಮಾನ್ಯವಾಗಿ ಯುದ್ಧ ಮಾಡಲು ಜನರನ್ನ ಬಳಸಲಾಗುತ್ತಿತ್ತು. ಆದ್ರೆ ನಾಡನ್ನ ಕಟ್ಟಲು ಜನರನ್ನ ಬಳಸಿದ್ದು ವಿಜಯನಗರ ಸಾಮ್ರಾಜ್ಯ. ಅಧಿಕಾರ ಬಂದಾಗ ಹಲವಾರು ಸವಾಲು ಬರುತ್ತೆ. ಬೆಂಗಳೂರಿನ ಬಗ್ಗೆ ನಾವು ಮಾತಾಡ್ತೀವಿ. ದೂರದೃಷ್ಠಿಯಿಂದ ಕೆಲಸ ಮಾಡಬೇಕು. ಕೆಂಪೇಗೌಡ ಪ್ರತಿಮೆ ಆಸೆ ಪಟ್ಟಿದ್ದಾರೆ. ಅದು ಸೂಕ್ತವಾಗಿದೆ. ಬೆಂಗಳೂರು ಕಟ್ಟಿದವರ ಪ್ರತಿಮೆ ಇದೆ. ಶಕ್ತಿಕೇಂದ್ರ ಪ್ರಥಮವಾಗಿ ಕೆಂಪೇಗೌಡ ಪ್ರತಿಮೆ ಮಾಡಬೇಕಾಗಿತ್ತು. ಆಗಿಲ್ಲ ಅದನ್ನ ಸರಿಪಡಿಸುತ್ತೇವೆ. ಮುಂದಿನ ಜಯಂತಿ ವೇಳೆ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ‌ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *