ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ : ಈ ಆದೇಶಕ್ಕೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ಏನು..?

1 Min Read

 

ಬೆಂಗಳೂರು: ಇತ್ತಿಚೆಗೆ ಶಾಲೆಗಳ ವಿಚಾರದಲ್ಲಿ ಸರ್ಕಾರದ ಆದೇಶಗಳು ವಿರೋಧಕ್ಕೆ ಕಾರಣವಾಗುತ್ತಿದೆ. ನಿನ್ನೆಯಷ್ಟೇ ವಸತಿ ಶಾಲೆಗಳಲ್ಲಿ ಧ್ಯೇಯ ವಾಕ್ಯವೇ ಬದಲಾಗಿದ್ದರ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬ ಆದೇಶ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಫೆಬ್ರವರಿ 16ಕ್ಕೆ ಹೊರಡಿಸಿರುವ ಆದೇಶದಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಅರ್ಥದಲ್ಲಿ ಆದೇಶ ಹೊರಡಿಸಲಾಗಿದೆ. ಇದೀಗ ಇದು ಬಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಇದರಲ್ಲಿ ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡುವಾಗ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಎಂದು ಪ್ರಿಂಟ್ ಮಿಸ್ಟೇಕ್ ಆಗಿದೆ. ಅದನ್ನು ಎಲ್ಲಾ ಶಾಲೆಗಳು ಎಂಬುದಾಗಿ ಪ್ರಿಂಟ್ ಮಾಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯದ ಬಗ್ಗೆಯೂ ಮಾತನಾಡಿದ್ದು, ಈ ಸಂಬಂಧ ಈಗಾಗಲೇ ಸದನದಲ್ಲಿ ಚರ್ಚೆಯಾಗಿದೆ. ಕೈಗಾರಿಕೆಗಳಿಗೆ ಹೆಸರು ಹಾಕುವ ಪದ್ಧತಿ ಬರುತ್ತದೆ ಎಂದಿದ್ದಾರೆ. ಶಿಕ್ಷಣ ಇಲಾಖೆ ಕಳೆದ ಕೆಲವು ದಿನಗಳಿಂದ ಎಡವಟ್ಟು ಮಾಡಿಕೊಳ್ಳುತ್ತಲೆ ಇದೆ.

ನಾಡಗೀತೆಯ ವಿಚಾರಕ್ಕೆ ಹೊರಡಿಸಿರುವ ಆದೇಶದಿಂದಾಗಿ ವಿರೋಧಕ್ಕೆ ಗುರಿಯಾಗಿತ್ತು. ಈಗ ಅದನ್ನು ಸರಿ ಮಾಡುವ ಭರವಸೆಯನ್ನು ನೀಡಿದೆ. ಕುವೆಂಪು ಅವರ ಕೈ ಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಬದಲಿಸಿ, ಧೈರ್ಯವಾಗಿ ಪ್ರಶ್ನಿಸಿ ಎಂಬ ಪದವನ್ನು ಸೇರಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *