ಸುದ್ದಿಒನ್, ಚಿತ್ರದುರ್ಗ, ಜನವರಿ.11 : ಇಂದು ನಗರಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್
ಸರ್ಕಾರಿ ಕಲಾ ಕಾಲೇಜಿಗೆ ಭೇಟಿ ನೀಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾದರು.
ಕಾಲೇಜಿಗೆ ಭೇಟಿ ನೀಡಿದ ಅವರು ನಾನು ಈ ಕಾಲೇಜಿನಲ್ಲಿ
ಪಿ.ಯು.ಸಿ ಮತ್ತು ಪದವಿ ಅಧ್ಯಯನ ಮಾಡಿದ್ದೆ ಎಂದು ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳನ್ನು ಮೆಲುಕು ಹಾಕಿ ಭಾವುಕರಾದರು. ವಿದ್ಯಾರ್ಥಿ ದಿಸೆಯಲ್ಲಿ ಕಾಲೇಜು, ಅಂದಿನ ವಿಧ್ಯಾರ್ಥಿ ಜೀವನ, ಸ್ನೇಹಿತರ ಬಗ್ಗೆ ಮತ್ತು ಅಂದು ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಹೂವಯ್ಯ ಗೌಡ ಅವರ ಆಡಳಿತ ದ ಬಗ್ಗೆ ಮೆಲುಕು ಹಾಕಿದರು. ನಾನು ಕಲಿತ ಈ ಕಾಲೇಜಿಗೆ ಶಾಶ್ವತವಾಗಿ ಉಳಿಯುವ ಕೆಲಸ ಮಾಡಲು ನಾನು ಸಿದ್ದನಿದ್ದೇನೆ. ಕಾಲೇಜಿಗೆ ಆಗಬೇಕಾದ ಕೆಲಸಗಳ ಬಗ್ಗೆ ತಿಳಿಸಿ ಎಂದು ಪ್ರಾಂಶುಪಾಲರಿಗೆ ತಿಳಿಸಿದರು. ಈ ವೇಳೆ ಅವರನ್ನು ಕಾಲೇಜು ಆಡಳಿತ ಮಂಡಳಿಯವರು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಬಿ.ಟಿ. ತಿಪ್ಪೇರುದ್ರಸ್ವಾಮಿ, ಜಿ.ಎಸ್.ಅನಿತ್ ಕುಮಾರ್, ಬಿಜೆಪಿ ಮುಖಂಡರು, ಡಾ.ಸ.ರಾ.ಲೇಪಾಕ್ಷ, ಪ್ರೊ.ಎಲ್.ನಾಗರಾಜಪ್ಪ,ಅಧ್ಯಾಪಕರ ಸಂಘದ ಕಾರ್ಯದರ್ಶಿ, ಮಲ್ಲಿಕಾರ್ಜುನ, ವಕೀಲರು, ನರೇಂದ್ರ, ಹನುಮಂತೆ ಗೌಡ,ಚಂದ್ರಶೇಖರ್, ಪವನ್, ಮಾಜಿ ಸಿಂಡಿಕೇಟ್ ಸದಸ್ಯರು, ಆದರ್ಶ, ಜಯಪಾಲಯ್ಯ, ರವಿ, ಕಿರಣ್, ಹಾಗೂ ಕಾಲೇಜಿನ ಅಧ್ಯಾಪಕರು ಹಾಗೂ ಭೋದಕೆತರ ಸಿಬ್ಬಂದಿ ಹಾಗೂ ಮುಖಂಡರು ಹಾಜರಿದ್ದರು.