ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಎನ್.ಪಿ.ಎಸ್. ರದ್ದುಗೊಳಿಸಿ ಓ.ಪಿ.ಎಸ್. ಪದ್ದತಿಯನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಂಗಳವಾರ ಪ್ರತಿಭಟನೆ ನಡೆಸಿ ಹಕ್ಕೊತ್ತಾಯಿಸಲಾಯಿತು.
ಕಳೆದ 6 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎನ್.ಪಿ.ಎಸ್. ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಸಂಪುಟ ಸಭೆಯಲ್ಲಿ ಎನ್.ಪಿ.ಎಸ್. ಪದ್ದತಿ ರದ್ದುಪಡಿಸುವ ಕುರಿತು ಉಪ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿರುವುದನ್ನು ಸಂಘದ ಪದಾಧಿಕಾರಿಗಳಿಗೆ ತಿಳಿಸುವುದಕ್ಕಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಹಕ್ಕೊತ್ತಾಯ ಚಿಂತನಾ ಸಭೆ ನಡೆಸಿದ ಎನ್.ಪಿ.ಎಸ್. ನೌಕರರು ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿ ಹೊಸ ಪಿಂಚಣಿ ಪದ್ದತಿ ತೊಲಗಲಿ ಎಂದು ಘೋಷಣೆಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷಿ, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷರುಗಳಾದ ಅಜಯ್‍ಕುಮಾರ್ ಕೆ.ಜಿ, ಕೋಮಲ್‍ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರವಿಕುಮಾರ್, ಎಕ್ಬಾಲ್, ತಾಲ್ಲೂಕು ಅಧ್ಯಕ್ಷ ಕಲ್ಲೇಶ್ ಡಿ. ಪ್ರಧಾನ ಕಾರ್ಯದರ್ಶಿ ಎನ್.ಜಿ.ರವೀಂದ್ರ ಪಾಟೀಲ್, ಖಜಾಂಚಿ ಅಜಯ್‍ಕುಮಾರ್ ಕೆ.ಜಿ. ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೆ. ಟಿ.ಶಿವಣ್ಣ, ಸಿ.ಆರ್.ಪಿ.ಗಳಾದ ಶ್ವೇತ, ಮಲ್ಲಿಕಾ, ಸೌಭಾಗ್ಯ, ಬಿ.ಆರ್.ಪಿ.ವಿದ್ಯಾ, ಶಿಕ್ಷಕಿಯರುಗಳಾದ ಸವಿತ, ರೇಖ, ಶಿಲ್ಪ, ರೇಣುಕಮ್ಮ, ವೀಣಾಶ್ರೀ, ಕಮಲಮ್ಮ, ಸರಸ್ವತಿ, ಲಕ್ಷ್ಮಿದೇವಿ, ಶೈಲ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.