ಬೆಳಗಾವಿ : ಚುಚ್ಚು ಮದ್ದು ಪಡೆದು ಅಸ್ವಗೊಂಡಿದ್ದ ಇಬ್ಬರು ಮಕ್ಕಳು ಇದೀಗ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೀಮ್ಸ್ ನಲ್ಲಿ ನಡೆದಿದೆ.
17 ಮಕ್ಕಳು ಚುಚ್ಚು ಮದ್ದು ಪಡೆದಿದ್ದರು. ಆದ್ರೆ ಅದರಲ್ಲಿ ಎರಡು ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು. ಹೀಗಾಗಿ ಆ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇದೀಗ ಮಕ್ಕಳು ನಿಗೂಢವಾಗಿ ಸಾವನ್ನಪ್ಪಿವೆ.
ಇಬ್ಬರು ಕಂದಮ್ಮಗಳ ನಿಗೂಢ ಸಾವು ಎಲ್ಲರನ್ನು ತಲೆ ಕೆಡೊಸಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಎರಡು ಅಸುಗೂಸು ಸಾವನ್ನಪ್ಪಿರುವುದು. ಈ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕುಲಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.