ಮೈಸೂರು: ಸಂತೋಷಿ ಮತ್ತು ಉಳಿದವರು ನನಗೆ ಅವಕಾಶ ಕೊಟ್ಟಿದ್ದಕ್ಕೆ ರಾಜಕಾರಣಕ್ಕೆ ಸಂಬಂಧಿಸದವನು ಬಂದು ಸಂಸದನಾಗಿದ್ದೇನೆ. ಎರಡು ಬಾರಿ ಸಂಸದನಾಗಿ ಕೆಲಸ ಮಾಡುತ್ತಿದ್ದೇನೆ. ರಾಜಕಾರಣ ಎಂದಾಕ್ಷಣ ಅವರ ಮಕ್ಕಳೋ, ದುಡ್ಡಿರೋರೋ, ಪರಿಚಯದವರನ್ನೋ ಬಿಟ್ಟು ಬೇರೆ ಬೇರೆ ಸಾಧನೆ ಮಾಡಿದವರಿಗೂ ಅವಕಾಶ ಕೊಟ್ಟಿರುವುದು ಬಿಜೆಪಿ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ರಾಜಕಾರಣ ಬಂದು ಯಾರಪ್ಪನ ಆಸ್ತಿಯೂ ಅಲ್ಲ. ಯಾರು ಕೆಲಸ ಮಾಡುತ್ತಾರೋ ಅವರು ರಾಜಕಾರಣದಲ್ಲಿ ಮುಂದುವರೆಯುತ್ತಾರೆ. ಕೆಲಸ ಮಾಡದವರು ಹೊರ ನಡೆಯುತ್ತಾರೆ. ಹಾಗೆ ಹೊಸಬರಿಗೆ ಅವಕಾಶ ನೀಡುತ್ತಾರೆ. ನನ್ನಂತವರನ್ನು ಕೈಹಿಡಿದು ಬೆಳೆಸಿದವರು ಸಂತೋಷಿಯವರು. ಅವರ ಮಾತಿಗೆ ನಂಗೆ ಗೌರವ ಇದೆ ಎಂದಿದ್ದಾರೆ.
ನಾವೂ ಹೇಳಿದ ಬಳಿಕ ತಾನೇ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡಿದ್ದು. ಸ್ವಕ್ಷೇತ್ರದಲ್ಲಿಯೇ ಸೋತಿದ್ದು ಯಾವಾಗ. ಮಂತ್ರಿಯವರ ಹೆಂಡತಿಯೇ ದುಡ್ಡು ತೆಗೆದುಕೊಂಡು ಸಿಕ್ಕಿ ಬಿದ್ದಾಗಲೂ ಅವರನ್ನು ಕ್ಯಾಬಿನೇಟ್ ನಿಂದ ತೆಗೆಯಲಿಲ್ಲ. ಎಂಕೆ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಹೆಸರು ಬರೆದಾಗಲೂ ಕೋರ್ಟ್ ಎಫ್ಐಆರ್ ದಾಖಲಿಸಿ ಅಂತ ಸೂಚನೆ ಕೊಡುವವರೆಗೂ ಜಾರ್ಜ್ ರಾಜೀನಾಮೆ ಕೊಡಲಿಲ್ಲ. ತೀರ್ಥಹಳ್ಳಿಯಲ್ಲಿ ದನಗಳನ್ನು ಎನ್ಕೌಂಟರ್ ಮಾಡಿದ್ದಂತ ಪೇದೆನ ಸಸ್ಪೆಂಡ್ ಮಾಡಿ ಪರಿಹಾರ ಕೊಟ್ಟರು. ಸರಣಿ ಹತ್ಯೆಗಳು ನಡೆಯಿತು. ಇದೆಲ್ಲ ಹೇಳಿ ಹೇಳಿ ಜನರಿಗೆ ಮನವರಿಕೆಯಾದ ಬಳಿಕ ತಾನೇ ಮೈಸೂರಲ್ಲಿ ಅವರನ್ನು ಸೋಲಿಸಿದ್ದು.
ಇಷ್ಟೆಲ್ಲಾ ಮಾತಾಡುತ್ತಾರಲ್ಲ ಸಿದ್ದರಾಮಯ್ಯನವರ ಸಹೋದ್ಯೋಗಿಯಾಗಿದ್ದಂತ ಜಾರ್ಜ್, ಡಿಕೆಶಿ, ಎಂಬಿ ಪಾಟೀಲ್ ಸೇರಿದಂತೆ ದೊಡ್ಡ ದೊಡ್ಡ ಕುಳಗಳು ಮುಂಚೆ ಏನಾಗಿದ್ರು. ಎಲ್ಲಿ ದುಡಿದು ಇಷ್ಟೆಲ್ಲಾ ಸಂಪಾದನೆ ಮಾಡಿದ್ದರಂತೆ. ವೈಟ್ ಟಾಪಿಂಗ್ ಮಾಡಿದ್ರಲ್ಲ ಅದ್ರಲ್ಲಿ ಎಷ್ಟು ಲೂಟಿ ಮಾಡುದ್ರು, ಸ್ಟೀಲ್ ಬ್ರಿಡ್ಜ್ ಅಂತ ಎಷ್ಟು ಹೊಡೆಯೋಕೆ ನೋಡಿದ್ರು. ಐದು ವರ್ಷದ ಹಿಂದೆ ನಡೆದಿದ್ದನ್ನು ಜನ ಮರೆತಿದ್ದಾರೆಂದು ಭಾವಿಸಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.