ಮೈಲಾರ ಕಾರ್ಣಿಕ ನಿಜವಾಯಿತು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಿತು : ಅಂದಿನ ಭವಿಷ್ಯವೇನಿತ್ತು..?

suddionenews
1 Min Read

 

 

ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರವನ್ನು ರಚನೆ ಮಾಡುತ್ತೆ. ಆದರೆ ಈ ಬಾರಿಯ ಸರ್ಕಾರ ರಚನೆ ಬಗ್ಗೆ ನುಡಿದ ಕಾರ್ಣಿಕ ನಿಜವಾಗಿದೆ. ಈ ಹಿಂದೆ ಸಾಕಷ್ಟು ಜ್ಯೋತಿಷಿಗಳು ಸರ್ಕಾರ ರಚನೆ ಬಗ್ಗೆ ಹಲವು ರೀತಿಯಲ್ಲಿ ಭವಿಷ್ಯ ನುಡಿದಿದ್ದರು. ಇದೀಗ ಮೈಲಾರಲಿಂಗ ಕಾರ್ಣಿಕ ನುಡಿದಿದ್ದ ಭವಿಷ್ಯ ನಿಜವಾಗಿದೆ.

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮೇ 20ರಂದು ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೋಡಿಮಠದ ಶ್ರೀಗಳು ಕೂಡ ರಾಜ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದರು. ಹಲವು ದೊಡ್ಡ ತಲೆಗಳು ಉರುಳಲಿವೆ, ಪಕ್ಷಾಂತರ ನಡೆಯಲಿವೆ, ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು‌‌. ಅವರ ಭವಿಷ್ಯವೂ ಕೂಡ ಬಹುತೇಕ ಸತ್ಯವಾಗಿದೆ.

ಮೈಲಾಲಿಂಗೇಶ್ವರ ಕಾರ್ಣಿಕ ಕೂಡ ಭವಿಷ್ಯ ನುಡಿದಿದ್ದರು. ಒಂದೇ ಸಾಲಿನಲ್ಲಿ ಕಾರ್ಣಿಕವನ್ನು ನುಡಿದರೂ ಸಹ ಅದು ಅರ್ಥವಾಗುವುದಿಲ್ಲ. ಆದರೆ ಅಲ್ಲಿ‌ನ ಹಿರಿಯರೇ ಅದರ ಅರ್ಥವನ್ನು ಹೇಳುತ್ತಾರೆ. ಈ ಬಾರಿ ಗೊರವಯ್ಯ ರಾಮಪ್ಪಜ್ಜ 11 ದಿನಗಳ ಕಾಲ ಉಪವಾಸವಿದ್ದು, 14 ಅಡಿ ಎತ್ತರದ ಮೈಲಾರದ ಡಂಕಣಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದರು. ಒಂದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿಯೂ ರಾಜ್ಯವನ್ನಾಳುತ್ತಾನೆ‌ ಎಂದು ಕಾರ್ಣಿಕ ನುಡಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *