ಮಯನ್ಮಾರ್ & ಥೈಲ್ಯಾಂಡ್ ಭೂಕಂಪ ; ಕನ್ನಡಿಗರ ಪರಿಸ್ಥಿತಿ ಹೇಗಿದೆ..?

ಈಚೆಗಂತೂ ಪ್ರಬಲ ಭೂಕಂಪದಿಂದಾಗಿ ಹಲವು ದೇಶಗಳು ನಲುಗುತ್ತಿವೆ. ಇದೀಗ ಮಯನ್ಮಾರ್ ಹಾಗೂ ಥೈಲ್ಯಾಂಡ್ ನಲ್ಲೂ ಭೂಕಂಪನವಾಗಿದೆ. ಈ ಎರಡು ದೇಶಗಳ ನಡುವೆ 735 ಮೈಲಿಯಷ್ಟು ಅಂತರವಿದೆ. ಪ್ರಬಲ ಭೂಕಂಪನದಿಂದ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ಸದ್ಯದ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ ಸಾವಿರಕ್ಕೂ ಅಧಿಕವಾಗಿದೆ. ಅದರಲ್ಲೂ ಮಯನ್ಮಾರ್ ಗಿಂತಲೂ ಥೈಲ್ಯಾಂಡ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ ಅಧಿಕ ಅನಾಹುತ ನಡೆದಿದೆ. ಇಲ್ಲಿ ಅವಶೇಷಗಳಡಿ ಸಿಲುಕಿದ್ದವರ ಶವಗಳು ಸಿಕ್ಕಿದ್ದರಿಂದ ಸಾವು – ನೋವಿನ ಸಂಖ್ಯೆ ದಿಢೀರನೇ ಏರಿಕೆಯಾಗಿದೆ.

ಅದರಲ್ಲೂ ಗಾಯಾಳುಗಳಿಗೆ ರಕ್ತದ ಅನಿವಾರ್ಯತೆ ಇರುವ ಕಾರಣ ರಕ್ತ ದಾನ‌ ಮಾಡುವಂತೆ ಮನವಿ ಮಾಡಿದ್ದಾರೆ. ಬದುಕುಳಿದವರ ಚಿಜಿತ್ಸೆಗೆ ಭಾರತ 15 ಟನ್ ರಕ್ಷಣಾ ಸಾಮಗ್ರಿಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಅಲ್ಲಿನವರ ರಕ್ಷಣೆಗೆ ಭಾರತ ಕೂಡ ಜೊತೆಯಾಗಿ ನಿಂತಿದೆ. ಇದರ‌ ನಡುವೆ ಅಲ್ಲಿರುವ ಕನ್ನಡಿಗರದ್ದೇ ಚಿಂತೆಯಾಗಿದೆ. ಆದರೆ ಕನ್ನಡಿಗರಿಗೆ ಏನು ಸಮಸ್ಯೆ ಆಗಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

ಪ್ರಬಲ ಭೂಕಂಪದ ಮಧ್ಯೆ ಬ್ಯಾಂಕಾಕ್ ಗೆ ತೆರಳಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಎಂಎಲ್ಸಿ ಮರಿತಿಬ್ಬೆಗೌಡ ಮಗಳು, ಅಳಿಯ ಮತ್ತು ಮೊಮ್ಮಗ ಕಳೆದ ಮೂರು ದಿನಗಳ ಹಿಂದೆ ಬ್ಯಾಂಕಾಕ್ ಪ್ರವಾಸಕ್ಕೆಂದು ಹೋಗಿದ್ದರು. ಸದ್ಯ ಸುರಕ್ಷಿತವಾಗಿ ವಾಪಾಸ್ ಬಂದಿದ್ದಾರೆ. ಇನ್ನು ಕೆಲವು ಕನ್ನಡಿಗರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕಿದೆ. ಯಾರಿಗೂ ತೊಂದರೆಯಾಗಿರುವ ಮಾಹಿತಿ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಮಯನ್ಮಾರ್ ಹಾಗೂ ಥೈಲ್ಯಾಂಡ್ ನ ಭೂಕಂಪದ ಬಗ್ಗೆ ಗೃಹ ಸಚಿವರು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *