Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ : ಮೇಘನಾ ಡೈಲಾಗ್ ಗೆ ಧ್ರುವ ಸರ್ಜಾ ಭಾವುಕ..!

---Advertisement---

ಬೆಂಗಳೂರು: ಮೇಘನಾ ರಾಜ್ ಅಭಿನಯದ ತತ್ಸಮ ತದ್ಭವ ಸಿನಿಮಾ ಇನ್ನೇನು ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಇದರ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಧ್ರುವ, ಮೇಘನಾ ರಾಜ್ ಭಾವುಕರಾದ ಕ್ಷಣವನ್ನು ಎಲ್ಲರು ನೋಡಿದ್ದಾರೆ. ಸ್ವತಃ ಧ್ರುವ ಸರ್ಜಾ ಅವರೇ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.

ಇನ್ನು ಟ್ರೇಲರ್‌ನಲ್ಲಿ ಮೇಘನಾ ರಾಜ್ ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ ಎಂಬ ಡೈಲಾಗ್ ಹೇಳುತ್ತಾರೆ. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ, ತತ್ಸಮ, ತದ್ಭವ ಸಿನಿಮಾದ ಟ್ರೇಲರ್ ನಂಗೆ ತುಂಬಾ ಕನೆಕ್ಟ್ ಆಗಿದೆ. ಸಿನಿಮಾದಲ್ಲಿ ಅತ್ತಿಗೆ ಒಂದು ಡೈಲಾಗ್ ಹೇಳ್ತಾರೆ. ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ ಅಂತ. ಆ ಡೈಲಾಗ್ ನಿಜಕ್ಕೂ ಮನಸ್ಸನ್ನು ಕದಡಿದೆ. ಇಲ್ಲಿ ನನ್ನ ಅಣ್ಣ ಮಿಸ್ಸಿಂಗ್ ಆಗಿದ್ದಾರೆ. ಇದು ಅತ್ತಿಗೆಯ ಕಮ್ ಬ್ಯಾಕ್ ಅಲ್ಲ. ಯಾವಾಗಲೂ ಸ್ಯಾಂಡಲ್ ವುಡ್ ನಲ್ಲಿಯೇ ಇರುತ್ತಾರೆ ಎಂದಿದ್ದಾರೆ.

ಇನ್ನು ಮೇಘನಾ ರಾಜ್ ಮಾತನಾಡಿ, ಈ ಸಿನಿಮಾ ಶುರುವಾಗೋಕೆ ಕಾರಣನೇ ನನ್ನ ಪತಿ ಚಿರಂಜೀವಿ ಸರ್ಜಾ. 2020ರಲ್ಲಿ ಪ್ರಜ್ವಲ್, ಪನ್ನಗಾ ಜೊತೆ ಸೇರಿ ಮೂವರು ಒಂದು ಸಿನಿಮಾ ಮಾಡೋಣಾ ಅಂತ ಹೇಳಿದ್ರು. ಆದ್ರೆ ಅದಾದ‌ ಮೇಲೆ ಏನೆಲ್ಲಾ ಆಯ್ತು ಅನ್ನೋದು ನಿಮಗೂ ಗೊತ್ತಿದೆ. ಆದ್ರೆ ಪನ್ನಗಾಭರಣ, ಗೆಳೆಯನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಪ್ರಜ್ವಲ್ ಕೂಡ ಒಂದೇ‌ ಒಂದು ಮಾತು ಆಡದೆ ಒಪ್ಪಿಕೊಂಡು ಬಿಟ್ಟರು. ನಮ್ಮ ತಂದೆ, ತಾಯಿ, ಅತ್ತೆ, ಮಾವ, ನನ್ನ ತಮ್ಮ ಧ್ರುವ ನಿಗೆ ಈ ಬೆಳವಣಿಗೆ ನಿಜಕ್ಕೂ ಇಷ್ಟವಾಗಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...