ತುಮಕೂರು: ದೊಡ್ಡ ಗೌಡರ ಮನೆಯ ಮಕ್ಕಳನ್ನ ಮಣ್ಣಿನ ಮಕ್ಕಳು ಎಂದು ಕರೆಯುವ ವಾಡಿಕೆ ಇದೆ. ದೇವೇಗೌಡರನ್ನ ಮಣ್ಣಿನ ಮಗ ಅಂತಾನೇ ಜನ ಹೊಗಳುತ್ತಾರೆ. ಇದೀಗ ದೇವೇಗೌಡ ಅವರೇ ಇದರ ಬಗ್ಗೆ ಮಾತಾಡಿದ್ದು, ಮಣ್ಣಿನ ಮಗ ಅಂತ ನನ್ನ ತಂದೆ ನನಗೆ ನಾಮಕರಣ ಮಾಇಲ್ಲ. ಹೋರಾಟವನ್ನ ಕಂಡು ಜನ ಹೀಗೆ ಕರೆಯುತ್ತಾರೆ ಎಂದಿದ್ದಾರೆ.

ತುಮಕೂರಿಗೆ ಭೇಟಿ ನೀಡಿದ್ದ ದೇವೇಗೌಡ ಅವರು ತಮ್ಮ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನ ಗೆಲ್ಲಿಸುವಂತೆ ಪ್ರಚಾರ ಮಾಡಿದ್ದಾರೆ. ಈ ವೇಳೆ ಬಳಗೆರೆಯಲ್ಲಿ ಮಾತನಾಡಿದ್ದು, ಮಣ್ಣಿನ ಮಗ ಅಂತ ಯಾರು ನಾಮಕರಣ ಮಾಡಿದ್ರೋ ಗೊತ್ತಿಲ್ಲ. ಯಾರು ಯಾವಾಗ ಮೊದಲು ಹೇಳಿದ್ದು ಗೊತ್ತಿಲ್ಲ. ಅಂದಿನಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಹೋರಾಟದ ಹಾದಿಯಲ್ಲಿ ಬಂದವನು. ಆದ್ದರಿಂದ ಜನ ಪ್ರೀತಿಯಿಂದ ಕರೆಯುತ್ತಾರೆ ಎಂದಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಜವಬ್ದಾರಿಯನ್ನ ನಾನು ತೆಗೆದುಕೊಂಡಿದ್ದೇನೆ. ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಜವಬ್ದಾರಿ ಇದೆ. ಸ್ವಂತ ಶಕ್ತಿಯಿಂದಾನೆ ಗೆಲ್ಲುವ ಪ್ರಯತ್ನ ಮಾಡ್ತೇವೆ. ನಮ್ಮ ದೇಶ ಚಿಕ್ಕ ದೇಶವಲ್ಲಾ, 130 ಕೋಟಿ ಜನಸಂಖ್ಯೆ ಇರುವ ದೇಶ. ಕೋವಿಡ್ ನಿರ್ವಹಣೆಯಲ್ಲಿ ಆರ್ಥಿಕ ಅವ್ಯವಹಾರ ಇದೆ. ಕೊರೊನಾ ಎದುರಿಸೋದು ಅಷ್ಟು ಸುಲಭವಲ್ಲ ಎಂದು ಮೋದಿ ಭೇಟಿ ವಿಚಾರದ ಬಗ್ಗೆ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.

