ಬೆಂಗಳೂರು: ರಾಜ್ಯಾದ್ಯಂತ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ಶುರುವಾಗಿದೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಸುವ ತನಕ ನಾವೂ ದಿನ ಬೆಳಗ್ಗೆ ಸುಪ್ರಭಾತ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿರುವ ಶ್ರೀರಾಮಸೇನೆ ಪ್ರತಿ ದಿನ ದೇವಸ್ಥಾನದಲ್ಲಿ ಸುಪ್ರಭಾತ ಹಾಕುತ್ತಿದ್ದಾರೆ. ಇಂಥ ಘಟನೆಗಳ ನಡುವೆ ಅಣ್ಣಮ್ಮನ ಮೆರವಣಿಗೆಯಲ್ಲಿ ಕುಣಿದಿರುವ ಮುಸ್ಲಿಂರು ಭಾವೈಕ್ಯತೆ ಸಾರಿದ್ದಾರೆ.
ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಇಂದು ಅಣ್ಣಮ್ಮದೇವಿಯ ಜಾತ್ರಾಮಹೋತ್ಸವ ನಡೆದಿದೆ. ಈ ವೇಳೆ ಹಿಂದೂ ಮುಸ್ಲಿಂ ಎಂಬ ಯಾವುದೇ ಬೇಧವಿಲ್ಲದೆ ಅಣ್ಣಮ್ಮ ದೇವಿ ಮುಂದೆ ಕೈ ಕೈ ಹಿಡಿದು ಕುಣಿದಿದ್ದಾರೆ. ಮೆರವಣಿಗೆಯಲ್ಲಿ ಆರಂಭದಿಂದ ಕೊನೆಯವರೆಗೆ ಜೊತೆಯಾಗಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಗಂಗೊಂಡನಹಳ್ಳಿಯಲ್ಲಿ ಹಿಂದೂಗಳಿಗಿಂತ ಮುಸ್ಲಿಂರೇ ಹೆಚ್ಚಾಗಿದ್ದಾರೆ. ಆದರೆ ಅಲ್ಲಿನವರು ಹಿಂದೂ ಮುಸ್ಲಿಂ ಹಬ್ಬ ಎಂಬ ಯಾವ ವ್ಯತ್ಯಾಸವನ್ನು ತೋರಿಸಯವುದಿಲ್ಲ. ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ಬದುಕುತ್ತಿದ್ದಾರೆ. ಹೀಗಾಗಿಯೇ ಹಿಂದೂ ದೇವರ ಮೆರವಣಿಗೆಯಲ್ಲೂ ಭಾಗವಹಿಸಿ ನಾವೆಲ್ಲಾ ಒಂದೇ ಎಂದು ತೋರಿಸಿದ್ದಾರೆ.