ಮಡಿಕೇರಿ: ಶನಿವಾರ ಸಂತೆ ಬಂದ್ ಮಾಡಲು ಮುಂದಾಗಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಅದನ್ನ ಉಲ್ಲಂಘಿಸಿ ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾಗಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಠಾಣೆ ಮುಂಭಾಗ ಪ್ರತಿಭಟಿಸುತ್ತಿದ್ದ ವೇಳೆ ಮುಸ್ಲಿಂ ಮಹಿಳೆಯೊಬ್ಬರು ಅಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಶನಿವಾರ ಸಂತೆಯನ್ನ ಬಂದ್ ಮಾಡಲಾಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಪೊಲೀಸರು ಬೆಳಗ್ಗೆಯಿಂದಲೇ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿ, ಯಾವುದೇ ಬಂದ್ ಹಾಗೂ ಪ್ರತಿಭಟನೆಗೆ ಅವಕಾಶವಿಲ್ಲವೆಂದು ಸೂಚಿಸಿದ್ದರು.
ಈ ನಡುವೆ ವ್ಯಾಪಾರಸ್ಥರು ಕೂಡ ಆತಂಕವಿಲ್ಲದೆ ವ್ಯಾಪಾರ ನಡೆಸಬಹುದೆಂದು ಸೂಚನೆ ನೀಡಲಾಗಿತ್ತು. ಆದ್ರೆ ಈ ಮಧ್ಯೆ ಬಲವಂತವಾಗಿ ಅಂಗಡಿಗಳನ್ನ ಬಂದ್ ಮಾಡಿಸಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಸೋಮವಾರಪೇಟೆ ಡಿವೈಎಸ್‍ಪಿ ಶೈಲೇಂದ್ರ ಕುಮಾರ್ ಮತ್ತು ಶನಿವಾರ ಸಂತೆ ಸಿಪಿಐ ಪರಶಿವಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರನ್ನ ಬಂಧಿಸಲಾಗಿದೆ.