ಮದುವೆ ವಾರ್ಷಿಕೋತ್ಸವದ ದಿನ ಹೆಂಡತಿ ಕೊಲೆ ಪ್ರಕರಣ : ಆರೋಪಿ ಪತಿ ಅರೆಸ್ಟ್

suddionenews
2 Min Read

ಚಿತ್ರದುರ್ಗ, (ಜ.09) : ತಾಲ್ಲೂಕಿನ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣನೂರು ಗ್ರಾಮದಲ್ಲಿ ಡಿಸೆಂಬರ್ 25 ರಂದು  ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯನ್ನು ಕೊಲೆ ಮಾಡಿ, ಬಚ್ಚಲು ಮನೆಯಲ್ಲಿ ಹೂತಿಟ್ಟು ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ಏನು ಗೊತ್ತಿಲ್ಲವೆಂಬಂತೆ ಠಾಣೆಗೆ ಬಂದು ಹೆಂಡತಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿರುತ್ತಾನೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯ ಮನೆಯಲ್ಲಿ ಸಿಮೆಂಟ್, ಜಲ್ಲಿ, ಮರಳು ಮಿಕ್ಸ್ ಮಾಡಿ ಕಾಂಕ್ರೀಟ್ ಹಾಕಿರುವ ಸ್ಢಳದಲ್ಲಿ
ಶೋಧನೆ ಕಾರ್ಯ ಕೈಗೊಂಡಾಗ ಮಹಿಳಾ ಶವವು ಪತ್ತೆಯಾಗಿದ್ದು,  ಸದರಿ ಶವವನ್ನು ಹೊರತೆಗೆದು
ಪರಿಶೀಲಿಸಿದಾದ ಆ ಶವವು ಆರೋಪಿಯ ಹೆಂಡತಿಯದ್ದೇ  ಎಂದು ತಿಳಿದು ಬಂದಿರುತ್ತದೆ.

ಘಟನೆ ಹಿನ್ನೆಲೆ : ಆರೋಪಿಯನ್ನು
ಕೂಲಂಕೂಶವಾಗಿ ವಿಚಾರಣೆ ಮಾಡಿದಾಗ ಆತನು ಕಳೆದ 6 ತಿಂಗಳಿನಿಂದ ತಾನು ದುಡಿದ ಸಂಬಳದ ಹಣವನ್ನು ಸಂಸಾರದ ಖರ್ಚಿಗೆ ತನ್ನ ಹೆಂಡತಿಗೆ
ಕೊಡದೇ ಓ.ಸಿ, ಹಾಗೂ ಇಸ್ಪಿಟ್ ಆಟವಾಡಿ, ಕುಡಿದು ಕಳೆಯುತ್ತಿದ್ದನು. ಈ ವಿಚಾರದಲ್ಲಿ
ಪ್ರತೀ ದಿನ ಗಂಡ-ಹೆಂಡತಿ ಜಗಳವಾಡುತ್ತದ್ದು, ಯಾವಾಗಲೂ ನನಗೆ ಹಣ ಕೇಳುತ್ತಾಳೆ ಹೇಗಾದರೂ ಮಾಡಿ ಕೊಲೆ ಮಾಡಿ ಸಾಯಿಸಿದರೆ ನಾನು ಮತ್ತು
ನನ್ನ ಮಗ ಇಬ್ಬರೇ ಆರಾಮಾಗಿ ಇರಬಹುದು ಎಂದು ಭಾವಿಸಿ ಡಿ.26 ರಂದು ಬೆಳಗಿನಜಾವ 5-30 ಗಂಟೆ ಸುಮಾರಿಗೆ ಮನೆಯಲ್ಲಿದ್ದ
ಒನಕೆಯನ್ನು ತೆಗೆದುಕೊಂಡು ತನ್ನ ಹೆಂಡತಿ ಸುಮಳ ತಲೆಗೆ ಎರಡು ಬಾರಿ ಹೊಡೆದು ಸಾಯಿಸಿ ಶವವನ್ನು
ಉಲ್ಲಾನ್ ರಗ್ಗಿನಿಂದ ಮುಚ್ಚಿ ಮನೆಯ ಹಾಲ್ ನಲ್ಲಿ ನೆಲಕ್ಕೆ ಹಾಕಿದ್ದ ಕಡಪದ ಕಲ್ಲುಗಳನ್ನು ತೆಗೆದು ಹಾರೆಯಿಂದ
ಗುಂಡಿ ಮಾಡಿ ತನ್ನ ಹೆಂಡತಿಯ ಶವವನ್ನು ಗುಂಡಿಯಲ್ಲಿ ಹೂತಿಟ್ಟಿರುತ್ತಾನೆ. ನಂತರ ಡಿ.29 ರಂದು ಭರಮಸಾಗರ ಠಾಣೆಗೆ ಹಾಜರಾಗಿ ತನ್ನ ಹೆಂಡತಿ ಕಾಣೆಯಾಗಿರುತ್ತಾಳೆಂದು ದೂರು ನೀಡಿರುತ್ತಾನೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಶ್ರೀಮತಿ ರಾಧಿಕಾ.ಜಿ. ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ  ಮಹಾನಿಂಗ ಬಿ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಉಪವಿಭಾಗದ ಡಿವೈಎಸ್‍ಪಿ ಪಾಂಡುರಂಗ ರವರ ನೇತೃತ್ವದಲ್ಲಿ
ಪೊಲೀಸ್ ನಿರೀಕ್ಷಕ ಮಧು.ಟಿ.ಎಸ್.
ರಾಜು.ಟಿ. ಪಿಎಸ್‍ಐ,
ಭರಮಸಾಗರ ಠಾಣೆ, ಮತ್ತು ಸಿಬ್ಬಂದಿಗಳಾದ ಎಎಸ್‍ಐ ಜಾಕೀರ್
ಹುಸೇನ್, ರವಿ.ಎಂ.ಬಿ. ಧೀರೇಂದ್ರ ಕುಮಾರ್, ಭರಮಸಾಗರ ಠಾಣೆಯ ಹೆಚ್‍ಸಿ ರಘುನಾಥ.ವಿ. ಶಿವಕುಮಾರ.ಬಿ.ಕೆ.
ಕೇಶವಪ್ಪ.ಎಸ್.ಹೆಚ್. ಸಿಪಿಸಿ  ಹಿದಾಯತ್‍ಉಲ್ಲಾ.ಜೆ. ಶ್ರೀನಿವಾಸ.ಟಿ.ಆರ್. ಹಾಗೂ
ಸಿರಿಗೆರೆ ಉಪಠಾಣಾ ಸಿಬ್ಬಂದಿಗಳಾದ  ಮಲ್ಲಿಕಾರ್ಜುನ.ಸಿ.ಬಿ. ಮಂಜಣ್ಣ.ಎಸ್.ವೈ. ಪಿಸಿ  ಬಸವರಾಜ.ಎಂ.ಡಿ.  ಜಗದೀಶ.ಎನ್. ರವರುಗಳ ಕಾರ್ಯವನ್ನು ಮಾನ್ಯ ಪೊಲೀಸ್
ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *