ಬೆಂಗಳೂರು: ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ಹಾಸ್ಟೇಲ್ ಬಾಲಕನ ಹತ್ಯೆಯಾಗಿದೆ. ಅದರಲ್ಲೂ ಅದೇ ಹಾಸ್ಟೇಲ್ ವಿದ್ಯಾರ್ಥಿ ರಾಡ್ ನಿಂದ ಹೊಡೆದು, ಹಲ್ಲೆ ಮಾಡಿ, ಪರಾರಿಯಾಗಿದ್ದಾನೆ. ಇನ್ನು ಕೂಡ ಆತನ ಸುಳಿವಿಲ್ಲ. ಈ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿ ಘಟನೆಗೆ ಕಾರಣವಾದ ಹುಡುಗನನ್ನ ಹುಡುಕುತ್ತಾ ಇದ್ದೇವೆ. ತಪ್ಪಿಸಿಕೊಂಡು ಹೋಗಿದ್ದಾನೆ. ಸದ್ಯದಲ್ಲಿಯೇ ಅವನನ್ನ ಹುಡುಕೊಂಡು ಬರ್ತೇವೆ. ಆಮೇಲೆ ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತೇವೆ. ಅವನು ಯಾಕೆ ಮಾಡಿದ, ಅವನ ಉದ್ದೇಶ ಏನು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಯಾರೋ ಹೇಳ್ತಾ ಇದ್ರು ಅವನು ಡ್ರಗ್ಸ್ ತೆಗೆದುಕೊಂಡಿದ್ದ ಅಂತ. ಅದರ ಸತ್ಯಾ ಸತ್ಯತೆ ಏನು ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತದೆ. ಒಂದು ವೇಳೆ ಅದು ಸತ್ಯ ಆಗಿದ್ರೆ ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ತೀವಿ ಎಂದಿದ್ದಾರೆ.
ಇದೇ ವೇಳೆ ಒಳ ಮೀಸಲಾತಿ ಬಗ್ಗೆ ಮಾತನ್ನಾಡಿ, ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ನಾವೂ 56% ರಿಸರ್ವೇಷನ್ ಕೊಡಬೇಕು, ಅದು ಜನಸಂಖ್ಯೆ ಆಧಾರದ ಮೇಲೆ ಕೊಡಬೇಕು ಅಂತ ಇರೋದು. 3% ಇದ್ದದ್ದನ್ನ ಇನ್ನು 3% ಜಾಸ್ತಿ ಮಾಡಿ, 7% ಪರ್ಸೆಂಟ್ ಮಾಡಿದೆವು. ಆ ಪ್ರಕಾರ ರಿಸರ್ವೇಷನ್ ಮಾಡೋದಕ್ಕೆ ಹೊರಟಿದ್ದು. ಮೋಹನ್ ದಾಸ್ ಅವರ ವರದಿ ಬಂದ್ಮೇಲೆ ಅದರ ಆಧಾರದ ಮೇಲೆ ಮೂರು ವರ್ಗಗಳಾಗಿ ಮಾಡಿದೆವು. ಅದಕ್ಕೆ ಎಲ್ಲರು ಒಪ್ಪಿದ್ದರು. ಕೋರ್ಟ್ ನಲ್ಲಿ ಯಾವಾಗ 50% ಕೊಡೋದಕ್ಕೆ ಆಗಲ್ಲ 50% ಮುಂದುವರೆಸಿಕೊಳ್ಳೋದಕ್ಕೆ ಪ್ರಾಬ್ಲಮ್ ಇಲ್ಲ ಅಂತ ಹೇಳಿತ್ತು. ಅದರಲ್ಲಿ ಹೇಗೆ ವರ್ಕೌಟ್ ಮಾಡಬೇಕು ಎಂಬ ಪ್ಲ್ಯಾನ್ ಮಾಡಿಕೊಳ್ತಾ ಇದ್ದಾರೆ. ಗೊಂದಲಗಳು ಆಗಬಾರದು ಅಂತ ಚರ್ಚೆಗಳು ನಡೀತಾ ಇದೆ. ಬಳಿಕ ಅದರ ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ.





