ಚಿತ್ರದುರ್ಗ : ಕೊಟ್ಟ ಹಣ ಕೇಳಿದ್ದಕ್ಕೆ ಕೊಲೆ

0 Min Read

 

ಚಿತ್ರದುರ್ಗ, (ಡಿ.07) : ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಬಳಿ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ನಗರದ  ಹೊರಪೇಟೆಯ ನಿವಾಸಿ
ಅಜರ್ ( 30) ಎಂದು ಗುರುತಿಸಲಾಗಿದೆ. ಸಾಲದ ರೂಪದಲ್ಲಿ ಕೊಟ್ಟಿದ್ದ ಹಣವನ್ನು ವಾಪಸ್ಸು ಕೇಳಿದ್ದಕ್ಕೆ ಹಣವನ್ನು ಕೊಡಲಾಗದೆ ಈ ದುರಂತ ನಡೆದಿದೆ.

ಆರೋಪಿಗಳಾದ ಮುಬಾರಕ್, ಪ್ರದೀಪ್ ಮತ್ತು ಬಾಬು ನಗರದಲ್ಲಿ ಪೋಲಿಸರಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಗರಠಾಣೆ ಇನ್ಸಪೆಕ್ಟರ್ ನಯೀಂ ಪಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *