ನಿಧಿ ಆಸೆಗಾಗಿ ಜ್ಯೋತಿಷಿ ಮಾತು ಕೇಳಿ ಕೊಲೆ : ಪರುಶುರಾಮಪುರ ಪೊಲೀಸರಿಂದ ಇಬ್ಬರ ಬಂಧನ

suddionenews
1 Min Read

ಚಿತ್ರದುರ್ಗ: ನಿಧಿ ಆಸೆ ಎಂಬುದು ಜನರಲ್ಲಿ ಇನ್ನು ಹೋಗಿಲ್ಲ. ಹೂತಿಟ್ಟಿರುವ ನಿಧಿ ಸಿಕ್ಕರೆ ಶ್ರೀಮಂತರಾಗಿ ಬಿಡಬಹುದು ಎಂಬ ಬಯಕೆ. ನಿಧಿ ಕೈ ಸೇರಬೇಕು ಅಂದ್ರೆ ಅದಕ್ಕೆ ಶಾಂತಿಯಾಗಬೆರಕು. ಆ ಶಾಂತಿಗಾಗಿ ಮನುಷಗಯನನ್ನೇ ಬಲಿಕೊಡಬೇಕೆಂದುಕೊಂಡು ಬಿಟ್ಟಿದ್ದಾರೆ. ಈಗ ಅಂಥದ್ದೇ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಕೊಲೆ ಮಾಡುವುದಕ್ಕೆ ಪ್ರಚೋದನೆ ಕೊಟ್ಟದ್ದು, ಆಂಧ್ರದ ಕಲ್ಯಾಣದುರ್ಗ ತಾಲೂಕಿನ ಕುಂದರ್ಪಿ ಗ್ರಾಮದ ಆನಂದರೆಡ್ಡಿ. ನಿಧಿಯ ಆಸೆಗೆ ಆತನ ಮಾತು ಕೇಳಿದ್ದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಟೆಗುಡ್ಡದ ರಾಮಕೃಷ್ಣ. ಈ ಇಬ್ಬರ ದುರಾಸೆಗೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೆಜೆ ಕಾಲೋನಿಯ ನಿವಾಸಿ ಪ್ರಭಾಕರ್.

ಮೃತ ಪ್ರಭಾಕರ್ ಪಾಪ ಪರಶುರಾಮಪುರದಲ್ಲಿ ಪಶ್ಚಿಮ ದಿಕ್ಕಿನಿಂದ ಬರುತ್ತಿದ್ದರು. ಅದನ್ನು ಗಮನಿಸಿದ್ದ ರಾಮಕೃಷ್ಣ, ತಮ್ಮ ಪರಮ ಗುರುಗಳು, ಆನಂದ ರೆಡ್ಡಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾನೆ. ಪಶ್ಚಿಮ ದಿಕ್ಕಿನಲ್ಲಿ ಬರುತ್ತಿರುವ ವ್ಯಕ್ತಿಯನ್ನ ಬಲಿ ಪಡೆದು, ಆ ರಕ್ತವನ್ನು ಮಾರಮ್ಮನಿಗೆ ಹಚ್ಚಿದರೆ ನಿಧಿ ಸಿಗುತ್ತೆ ಎಂಬುದು. ಹೀಗಾಗಿ ಪ್ರಭಾಕರನನ್ನು ಡ್ರಾಪ್ ಕೊಡುವ ನೆಪದಲ್ಲಿ ಕೂರಿಸಿಕೊಂಡು, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದು ಎರಡು ದಿನವಾದ ಮೇಲೆ ಬೆಳಕಿಗೆ ಬಂದಿದೆ. ವಿಷಯ ಗೊತ್ತಾಗುತ್ತಿದ್ದಂತೆ SP ರಂಜಿತ ಕುಮಾರ್ ಹಾಗೂ ASP ಕುಮಾರಸ್ವಾಮಿ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಶುರಾಮಪುರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನರಬಲಿಯಾಗಿ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪರುಶುರಾಂಪುರ PI ಹನುಂತಪ್ಪ, PSI ಮಾರುತಿ ಅವರು ಆರೋಪಿ ಆನಂದರೆಡ್ಡಿ, ರಾಮಕೃಷ್ಣ ಅವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಆದರೆ ಈ ಇಬ್ವರ ನಿಧಿ ಆಸೆಗೆ ಅಲ್ಲೊಂದು ಕುಟುಂಬವೇ ದುಃಖದಲ್ಲಿ ಕೈ ತೊಳೆಯುವಂತೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *