ಕೋಲಾರ: ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುತ್ತೀನಿ ಅಂತ ಹಲವು ಬಾರಿ ಕೋಲಾರಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಜೊತೆಗೆ ಸಭೆಗಳನ್ನು ನಡೆಸಿ, ಜನರ ಜೊತೆಗೆ ಸಂಪರ್ಕ ಸಾಧಿಸುವ ಕೆಲಸ ಮಾಡಿದ್ದರು. ಆದ್ರೆ ವರದಿಗಳ ಪ್ರಕಾರ, ಸಿದ್ದರಾಮಯ್ಯ ಅವರೇ ಮಾಡಿಸಿದ ಸರ್ವೇ ಪ್ರಕಾರ ಕೋಲಾರ ಸೇಫ್ ಅಲ್ಲ ಎಂಬ ಸತ್ಯ ಗೊತ್ತಾಗಿತ್ತು. ಹೀಗಾಗಿ ಹೈಕಮಾಂಡ್ ಕೂಡ ಇದಕ್ಕೆ ರೆಡ್ ಸಿಗ್ನಲ್ ಕೊಟ್ಟಿತ್ತು. ಇದೀಗ ಕೆ ಎಚ್ ಮುನಿಯಪ್ಪ ಅವರಿಗೂ ಕೋಲಾರ ಕೈತಪ್ಪಿದೆ.
ಸತತವಾಗಿ ಕೋಲಾರದಿಂದಾನೇ 28 ಬಾರಿ ಸಂಸದರಾಗಿದ್ದ ಮುನಿಯಪ್ಪ ಅವರು ಈ ಬಾರಿ ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ತಯಾರಿ ನಡೆಸಿದ್ದಾರೆ. ಅಷ್ಟು ವರ್ಷ ಗೆಲ್ಲಿಸಿದ್ದ ಕೋಲಾರದಿಂದಾನೇ ನಿಲ್ಲಬೇಕು ಎಂಬುದು ಮುನಿಯಪ್ಪ ಅವರ ಆಸೆಯಾಗಿತ್ತು. ಅದಕ್ಕಾಗಿಯೇ ಕೋಲಾರದ ಟಿಕೆಟ್ ನೀಡಿ ಎಂದು ಹೈಕಮಾಂಡ್ ಬಳಿ ಮನವಿ ಕೂಡ ಮಾಡಿದ್ದರು. ಸಿದ್ದರಾಮಯ್ಯ ಕೋಲಾರಕ್ಕೆ ಎಂಟ್ರಿಯಾದಾಗ ಮುನಿಯಪ್ಪ ಅವರು ಮುನಿಸಿಕೊಂಡಿದ್ದರು. ಆದ್ರೆ ಈಗ ಹೈಕಮಾಂಡ್ ನಡೆ ಗೊಂದಲ ಮೂಡಿಸಿದೆ.
ಮುನಿಯಪ್ಪ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ದೇವನಹಳ್ಳಿಗೆ ಟಿಕೆಟ್ ನೀಡಲಾಗಿದೆ. ದೇವನಹಳ್ಳಿಯಲ್ಲಿ ಮುನಿಯಪ್ಪ ವಿರುದ್ಧ ಬಂಡಾಯವೂ ಇದೆ. ಈ ಮಧ್ಯೆ ಅಲ್ಲಿ ಮುನಿಯಪ್ಪ ಮ್ಯಾಜಿಕ್ ಮಾಡಿ ಗೆಲ್ಲಬೇಕಿದೆ. ಇನ್ನು ಕೂಡ ಕೋಲಾರವನ್ನು ಯಾರಿಗೂ ಘೋಷಣೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಕೋಲಾರ, ಬಾದಾಮಿ, ವರುಣಾ ಕ್ಷೇತ್ರವನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಆ ಕ್ಷೇತ್ರಕ್ಕೆ ಇನ್ನು ಯಾರನ್ನು ಘೋಷಣೆ ಮಾಡದೆ ಕಾಯ್ದಿರಿಸಲಾಘಿದೆ.