Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕಾಲುವೆಯಲ್ಲಿ ಹೂಳೆತ್ತಿಸಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ನಗರಸಭೆ ಪೌರಾಯುಕ್ತರು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 22 : ಹೊಳಲ್ಕೆರೆ ರಸ್ತೆ ಕನಕ ವೃತ್ತದ ಹತ್ತಿರವಿರುವ ಹಳ್ಳದ ಏರಿಯಾದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ಜೆ.ಸಿ.ಬಿ. ಮೂಲಕ ತೆಗೆಸಿ ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಲಾಯಿತು.

ಅರಣ್ಯ ಇಲಾಖೆಯ ನಿವೃತ್ತ ನೌಕರರೊಬ್ಬರು ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ಬಂದಾಗ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತದೆ. ಸಾಕಷ್ಟು ಬಾರಿ ಹಳ್ಳದ ಏರಿಯಾ ನಿವಾಸಿಗಳು ರಾಜ ಕಾಲುವೆ ಒತ್ತುವರಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೂ ಮನವಿ ನೀಡಿದ್ದಾರೆ. ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.

2022-23 ನೇ ಸಾಲಿನಲ್ಲಿಯೇ ಹಳ್ಳದ ಏರಿಯಾದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎನ್ನುವುದು ಅಲ್ಲಿನ ನಿವಾಸಿಗಳ ಅಳಲು.

ನಗರಸಭೆ ಪೌರಾಯುಕ್ತರ ಭೇಟಿ : ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕಾರವರು ಹಳ್ಳದ ಏರಿಯಾದಲ್ಲಿ ಮುಂದೆ ನಿಂತು ಜೆಸಿಬಿ ಸಹಾಯದಿಂದ ರಾಜ ಕಾಲುವೆಯಲ್ಲಿನ ಮಣ್ಣನ್ನು ತೆಗೆಸಿದರು.

ಚಂದ್ರವಳ್ಳಿ ಕೆರೆ ತುಂಬಿ ಕೋಡಿ ಬಿದ್ದರೆ ನೀರು ನುಗ್ಗಿ ಅನಾಹುತವಾಗುವುದನ್ನು ತಪ್ಪಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ ಕಾಲುವೆ ಒತ್ತುವರಿಯಾಗಿರುವುದರ ಕುರಿತು ಸರ್ವೆ ನಡೆಸುವಂತೆ ಸರ್ವೆ ಇಲಾಖೆಗೆ ಕೇಳಿಕೊಂಡಿದ್ದೇವೆ. ಇದುವರೆವಿಗೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ರಾಜಕಾಲುವೆಯಲ್ಲಿನ ಮಣ್ಣನ್ನು ತೆಗೆಸುತ್ತಿದ್ದೇವೆ. ಮುಂದೆ ಸರ್ವೆ ಆದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಸರ ಇಂಜಿನಿಯರ್ ಜಾಫರ್, ಬಾಳೆಕಾಯಿ ಶ್ರೀನಿವಾಸ್, ಸುಭಾನುಲ್ಲ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರೇಣುಕಾಸ್ವಾಮಿ ಕೊಲೆ ಕೇಸ್ : ನಾಲ್ವರು ತುಮಕೂರು ಜೈಲಿಗೆ ಶಿಫ್ಟ್.. ಯಾಕೆ ಗೊತ್ತಾ..?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಸೇರಿದಂತೆ ಹದಿನೇಳು ಜನ ಜೈಲುಪಾಲಾಗಿದ್ದಾರೆ. ಶನಿವಾರ ನಾಲ್ವರ ಕಸ್ಟಡಿ ಅಂತ್ಯವಾದ ಹಿನ್ನೆಲೆ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದೀಗ ಹೊಸ ಬೆಳವಣಿಗೆ ಏನು ಅಂದ್ರೆ ಹದಿನೇಳು

ಪವಿತ್ರಾ ಗೌಡ ಮನೆ ತೆಗೆದುಕೊಳ್ಳಲು 2 ಕೋಟಿ ಕೊಟ್ಟಿರುವ ಮೃತ ನಿರ್ಮಾಪಕ ಸೌಂದರ್ಯ ಜಗದೀಶ್..!

  ಬೆಂಗಳೂರು: ಅತ್ತ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್.. ಇತ್ತ ರೇಣುಕಾಸ್ವಾಮಿ ಕೊಲೆ ಕೇಸ್. ಎರಡು ತನಿಖೆಯ ಹಂತದಲ್ಲಿಯೇ ಇದೆ. ಇದೀಗ ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ನಡುವೆ ಕೋಟಿ ಕೋಟಿ

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜಿ.ಎಸ್. ಮಂಜುನಾಥ್ ನೇಮಕ

ಸುದ್ದಿಒನ್, ಚಿತ್ರದುರ್ಗ, ಜೂನ್. 24  : ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿತ್ರದುರ್ಗ ಜಿಲ್ಲೆಯ ಜಿ. ಎಸ್.  ಮಂಜುನಾಥ್ ಇವರನ್ನು ಅಧ್ಯಕ್ಷರನ್ನಾಗಿ, ನಾಮ ನಿರ್ದೇಶನ  ಮಾಡಿ ಸಮಾಜ ಕಲ್ಯಾಣ ಇಲಾಖೆಯ ಉಪ

error: Content is protected !!