ಕ್ರಿಸ್ಮಸ್ ಅಂಡ್ ನ್ಯೂ ಇಯರ್ ಹಿನ್ನೆಲೆ ಮುಂಬೈನಲ್ಲಿ ಜನವರಿ 2ರ ತನಕ ಕರ್ಫ್ಯೂ ಜಾರಿ..!

ಮುಂಬೈ: ಡಿಸೆಂಬರ್ ಬಂತು ಎಂದರೆ ನ್ಯೂ ಇಯರ್ ಸೆಲೆಬ್ರೇಷನ್ ಗಾಗಿ ಎಲ್ಲೆಡೆ ತಯಾರಿ ಶುರುವಾಗುತ್ತದೆ. ಈ ತಯಾರಿಯ ನಡುವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಲ್ಳುವುದಕ್ಕೆ ಪೊಲೀಸರು ಕೂಡ ಸಜ್ಜಾಗಿದ್ದಾರೆ. ಇದರ ಭಾಗವಾಗಿ ಮುಂಬೈನಲ್ಲಿ ಹೈಅಲರ್ಟ್ ಘೋಷನೆ ಮಾಡಲಾಗಿದೆ. ಭಯೋತ್ಪಾದಕರ ಮೇಲೆ ಕಣ್ಣಿಟ್ಟಿರುವ ಪೊಲೀಸರು ಜನವರಿ 2ರ ತನಕ ಕರ್ಫ್ರ್ಯೂ ವಿಧಿಸಿದ್ದಾರೆ.

ಜನವರಿ 2ರ ತನಕ ಬಂದೂಕು, ಕತ್ತಿ ಸೇರಿದಂತೆ ಇತರ ಆಯುಧಗಳ ಜೊತೆಗೆ ಓಡಾಡುವಂತಿಲ್ಲ. ಜೊತೆಗೆ ಐದಕ್ಕಿಂತ ಹೆಚ್ಚು ಜನ ಒಂದು ಕಡೆ ಗುಂಪು ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಅಧಿಕೃತ ಸೂಚನೆಯ ಪ್ರಕಾರ ಮದುವೆ, ಸಭೆ ಸಮಾರಂಭಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ.

ಇನ್ನು ಇದೇ ವೇಳೆ ಕ್ಲಬ್ ಗಳು, ಸಹಕಾರ ಸಂಘಗಳ ಮೇಲೆ ನಿಷೇಧ ಹೇರಲಾಗಿದೆ. ಸಾರ್ವಜನಿಕ ಚಲನಚಿತ್ರ ಪ್ರದರ್ಶನಗಳು, ಸುತ್ತಮುತ್ತಲಿನಲ್ಲಿ ಯಾವುದೇ ನಾಟಕ ಪ್ರದರ್ಶನಗಳು ನಡೆಯುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಶಾಲಾ-ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಿಷೇಧ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *