ತವರಿನ ಅಭಿಮಾನಿಗಳ ಮುಂದೆ ಮುಂಬೈ ಇಂಡಿಯನ್ಸ್ ಆಟ : ನಾಯಕ ಹಾರ್ದಿಕ್ ಮುಖದಲ್ಯಾಕೆ ಚಿಂತೆ..?

suddionenews
1 Min Read

ಕ್ರಿಕೆಟ್ ಅಭಿಮಾನಿಗಳಿಗೆ ದಿನವೂ ಹಬ್ಬವೇ. ಆದರೆ ಪ್ರತಿ‌ದಿನ ಒಬ್ಬರ ಜಡೆಯ ಅಭಿಮಾನಿಗಳಿಗೆ ಮಾತ್ರ ಬೇಸರ. ಇಂದು ಮುಂಬೈ ಕ್ರಿಕೆಟ್ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಖುಷಿ. ಯಾಕಂದ್ರೆ ಐಪಿಎಲ್ ನ 17ನೇ ಆವೃತ್ತಿಯ ಆಟದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಮ್ನ ತವರು ನೆಲದಲ್ಲಿ, ಅಭಿಮಾನಿಗಳ ಮುಂದೆ ಬ್ಯಾಟ್ ಬೀಸಿ, ಬಾಲ್ ಹಿಡಿಯಲಿದ್ದಾರೆ. ಇಂದು ರಾಜಸ್ಥಾನ ರಾಯಲ್ಸ್ ಎದುರು ಮುಂಬೈ ಇಂಡಿಯನ್ಸ್ ಟೀಂ, ವಾಂಖೇಡೆ ಕ್ರೀಡಾಂಗಣದಲ್ಲಿ ಸೆಣೆಸಾಡಲಿವೆ.

ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ ಆಡಿರುವಂತ ಎರಡು ಪಂದ್ಯಗಳನ್ನು ಸೋತಿದೆ. ಇದರ ನಡುವೆ ಗೆಲುವುಗಾಗಿ ಹರಸಾಹಸ ಪಡುತ್ತಿದೆ. ಇವತ್ತು ತವರಿನಲ್ಲಿಯೇ ಆಡುತ್ತಿರುವ ಕಾರಣ ಜೋಶ್ ಜೋರಾಗಿಯೇ ಇರಬೇಕಾಗುತ್ತು. ಜೊತೆಗೆ ಅಭಿಮಾನಿಗಳ ಹಾರೈಕೆಯೂ ಹತ್ತಿರದಲ್ಲಿಯೆ ಸಿಗಲಿದೆ. ಆದರು ಎಂಐ ನಾಯಕ ಹಾರ್ದಿಕ್ ಪಾಂಡ್ಯನ ಮುಖದಲ್ಲಿ ಆ ನಗು ಕಾಣಿಸುತ್ತಿಲ್ಲ. ಮೌನವೇ ಆವರಿಸಿದೆ.

ಹಾರ್ದಿಕ್ ಪಾಂಡ್ಯ ನಡೆಗೆ ಅಭಿಮಾನಿಗಳು ಬೇಸ ವ್ಯಕ್ತಪಡಿಸುತ್ತಿದ್ದಾರೆ. ಪಾಂಡ್ಯ ತವರು ನೆಲ ಅಲಹಬಾದ್ ನಲ್ಲಿ ಪಂದ್ಯವಾಡುವಾಗಲೇ ಅಭಿಮಾನಿಗಳು ಬಿಸಿ ಮುಟ್ಟಿಸಿದ್ದರು.ತಮ್ಮ ತಂಡ ಬಿಟ್ಟು ಬೇರೆ ತಂಡಕ್ಕೆ ಆಡುತ್ತೀರಾ ಎಂದು ಚಿತ್ರ ವಿಚಿತ್ರ ಘೋಷ ವಾಕ್ಯಗಳನ್ನು ಕೂಗಿ ಆಕ್ರೋಶ ಹೊರ ಹಾಕಿದ್ದರು. ಹಾರ್ದಿಕ್ ಪಾಂಡ್ಯ ನಾಯಕತ್ವ ಸಿಕ್ಕ ಬಳಿಕ ಅನುಭವಿಗಳ ಆಟಕ್ಕೆ ಮಣೆ ಹಾಕುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೋಚರವಾಗಿದೆ. ಜಸ್ಪ್ರಿತ್ ಬೂರ್ಮಾ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಈಗ ಮುಂಬೈನಲ್ಲಿ ಸಾಲು ಸಾಲು ಸವಾಲು ಎದುರಾಗಿದೆ. ಹಾರ್ದಿಕ್ ಪಾಂಡ್ಯ ಅದೆಲ್ಲವನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದನ್ನು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *