ಲಕ್ನೋ : ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಯತ್ತಿದ್ದಂತೆ ಚುನಾವಣಾ ಕಣ ರಂಗೇರಿದೆ. ಅದರಲ್ಲಿ ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಒಂದೊಂದು ತಿರುವು, ಒಂದೊಂದು ಬದಲಾವಣೆ ನಡೆಯುತ್ತಲೆ ಇದೆ. ಅದರಲ್ಲೂ ಪಕ್ಷಾಂತರ ಪರ್ವ ಜೋರಾಗಿದೆ.
ಬಿಜೆಪಿ ಬಿಟ್ಟು ಇಬ್ಬರು ಸಚಿವರು ಅಖಿಲೇಶ್ ಯಾದವ್ ಪಕ್ಷ ಸೇರಿದ್ರೆ, ಇದೀಗ ಬಿಜೆಪಿಗೆ ಹಲವರು ಸೇರ್ಪಡೆಯಾಗುತ್ತಿದ್ದಾರೆ. ಆ ಸಾಲಿನಲ್ಲಿ ಇದೀಗ ಕಾಂಗ್ರೆಸ್ ನಾಯಕಿಯೂ ಇದ್ದಾರೆ. ಮಾಜಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮೌರ್ಯ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿರುವ ಪ್ರಿಯಾಂಕ ಮೌರ್ಯ, ನಾನು ಸಮಾಜಸೇವೆ ಮಾಡುವ ಉದ್ದೇಶದಿಂದ ಬಿಜೆಪಿಗೆ ಸೇರಿದ್ದೇನೆ. ಕಾಂಗ್ರೆಸ್ ನಲ್ಲಿದ್ದಾಗಲೂ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದ್ರೆ ಕಾಂಗ್ರೆಸ್ ನನಗೆ ಯಾವುದೇ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.