ಚಿತ್ರದುರ್ಗ, (ಫೆ.28): ಜೋಗಿಮಟ್ಟಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮುಕ್ತಿನಾಥೇಶ್ವರಸ್ವಾಮಿ ದೇವಾಲಯವನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ಲೋಕಾರ್ಪಣೆಗೊಳಿಸಿದರು.ನಂತರ ನಗರಸಭೆ ಸಾಮಾನ್ಯ ನಿಧಿಯಲ್ಲಿ ಕಟ್ಟಿರುವ ಸ್ನಾನಗೃಹ ಮತ್ತು ಶೌಚಾಲಯವನ್ನು ಉದ್ಘಾಟಿಸಿದರು.

ಮುಕ್ತಿನಾಥೇಶ್ವರ ದೇವಾಲಯ ಮತ್ತು ಸ್ನಾನಗೃಹ, ಶೌಚಾಲಯ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿಶಾಲವಾದ ಈ ಸ್ಮಶಾನದ ಆವರಣದಲ್ಲಿ ಬಳ್ಳಾರಿ ಜಾಲಿಗಿಡಗಳು ಬೆಳೆದಿದ್ದು, ಶವಸಂಸ್ಕಾರಕ್ಕೆ ಜಾಗವಿಲ್ಲದಂತಾಗಿತ್ತು. ಅಲ್ಲದೆ ಅಂತ್ಯಸಂಸ್ಕಾರದ ನಂತರ ಇಲ್ಲಿ ಕೈಕಾಲು ತೊಳೆಯುವುದಕ್ಕೂ ನೀರಿನ ಸೌಕರ್ಯವಿರಲಿಲ್ಲ. ಈಗ ದೇವಸ್ಥಾನ ಮತ್ತು ಸ್ನಾನಗೃಹ ಶೌಚಾಲಯವಾಗಿದೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸದಸ್ಯರುಗಳಾದ ಆರ್.ನಾಗಮ್ಮ, ತಾರಕೇಶ್ವರಿ, ಮಾಜಿ ಸದಸ್ಯರುಗಳಾದ ಚಿಲಿಲಿ ವೆಂಕಟೇಶ್, ಜೆ.ಮಹೇಶ್, ಗಾಡಿ ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಏಕನಾಥೇಶ್ವರಿ ದೇವಸ್ಥಾನ ಕಮಿಟಿ ಅಧ್ಯಕ್ಷ ದೊರೆಸ್ವಾಮಿ, ಫೈಲ್ವಾನ್ ಭೈರಪ್ಪ, ಮಂಜುನಾಥ್, ಅಶೋಕ್, ಗಿರೀಶ್, ಮಹಡಿ ಶಿವಮೂರ್ತಿ, ಕೆ.ಇ.ಬಿ.ಷಣ್ಮುಖಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

