ಹೊಸದಿಲ್ಲಿ: ದೇಶದಲ್ಲಿ ಕೈಗಾರಿಕಾ ಕೋಟ್ಯಾಧಿಪತಿಗಳ ಸಂಖ್ಯೆ ( ರೂ.7,300 ಕೋಟಿಗಿಂತಲೂ ಹೆಚ್ಚು ಮೌಲ್ಯ ಹೊಂದಿರುವವರು) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2021 ರ ಪ್ರಕಾರ , ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ 10 ನೇ ವರ್ಷವೂ ಭಾರತದ ಶ್ರೀಮಂತ ವ್ಯಕ್ತಿಯಾಗಿ (ಅಂದರೆ 7,18,000 ಕೋಟಿ ರೂ.) ಮುಂದುವರೆದಿದ್ದಾರೆ.
ಈ ವರ್ಷ, ಗೌತಮ್ ಅದಾನಿ ಮತ್ತು ಕುಟುಂಬವು ರೂ. 5,05,900 ಕೋಟಿಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.ಮುಖೇಶ್ ಅಂಬಾನಿಯೊಂದಿಗೆ, ಎಲ್ ಎನ್ ಮಿತ್ತಲ್, ಕುಮಾರ ಮಂಗಳಮ್ ಬಿರ್ಲಾ ಮತ್ತು ಶಿವ್ ನಾಡಾರ್ ಅವರು ಹತ್ತು ವರ್ಷಗಳಿಂದ ಭಾರತದ ಕುಬೇರರ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಇದ್ದಾರೆ.
ಈ ವರ್ಷ ಭಾರತದ ಅಗ್ರ 10 ಕುಬೇರರ ಪಟ್ಟಿಯಲ್ಲಿ ನಾಲ್ಕು ಹೊಸಬರನ್ನು ಸೇರಿಸಲಾಗಿದೆ. ಗೌತಮ್ ಅದಾನಿ ಮತ್ತು ಕುಟುಂಬವು ಕೇವಲ ಒಂದು ದಿನದಲ್ಲಿ ಸುಮಾರು 1,002 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ.
15 ಸೆಪ್ಟೆಂಬರ್ 2021 ರ ಹೊತ್ತಿಗೆ, ಐಐಎಫ್ಎಲ್ ವೆಲ್ತ್ ಹುರುನ್ ಶ್ರೀಮಂತ ಪಟ್ಟಿಯಲ್ಲಿ ದೇಶಾದ್ಯಂತ 119 ನಗರಗಳ 1,007 ವ್ಯಕ್ತಿಗಳ ನಿವ್ವಳ ಮೌಲ್ಯ ₹ 1,000 ಕೋಟಿಗಳಷ್ಟಿದೆ. ಅವರ ಸಂಪತ್ತು ಸರಾಸರಿ ಶೇ. 25% ಹೆಚ್ಚಾಗಿದೆ. 894 ಜನರು ತಮ್ಮ ಸಂಪತ್ತನ್ನು ವೃದ್ದಿಸಿಕೊಂಡಿದ್ದಾರೆ ಇಲ್ಲವೇ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇವರಲ್ಲಿ 229 ಮಂದಿ ಹೊಸಬರಿದ್ದಾರೆ. ಹಾಗೆಯೇ ಈ ವರ್ಷದಲ್ಲಿ 113 ಜನರ ಸಂಪತ್ತು ಕುಸಿದಿದೆ. 2021 ರ ವೇಳೆಗೆ ಭಾರತದಲ್ಲಿ 237 ಬಿಲಿಯನೇರ್‌ಗಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅವರ ಸಂಖ್ಯೆ 58 ಮಂದಿ ಹೆಚ್ಚಾಗಿದ್ದಾರೆ.