ನವದೆಹಲಿ : ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗೌತಮ್ ಅದಾನಿ ಕೇವಲ ಒಂದು ದಿನ ಮಾತ್ರ ಆ ಸ್ಥಾನದಲ್ಲಿ ಉಳಿಯಲು ಸಾಧ್ಯವಾಯಿತು.
24 ಗಂಟೆಗಳ ಬಳಿಕ ಮತ್ತೆ ಮುಖೇಶ್ ಅಂಬಾನಿ ತಮ್ಮ ಮೊದಲ ಸ್ಥಾನ ನ್ನು ಅಲಂಕರಿಸಿದರು. ಈ ಮೂಲಕ ಅದಾನಿ ಏಷ್ಯಾದ 2ನೇ, ಮತ್ತು ವಿಶ್ವದ 11ನೇ ಕ್ರಮಾಂಕದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಬ್ಬರ ನಡುವಿನ ಸಂಪತ್ತಿನ ವ್ಯತ್ಯಾಸದಿಂದಾಗಿ ಮುಖೇಶ್ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ.
ಬುಧವಾರ ಬೆಳಿಗ್ಗೆ, ಫೆಬ್ರವರಿ 9, 2022 ರಂದು, ಬ್ಲೂಮ್‌ಬರ್ಗ್ ಸೂಚ್ಯಂಕದಲ್ಲಿ ಮುಖೇಶ್ ಅಂಬಾನಿಯವರ ಸಂಪತ್ತು 89.2 ಬಿಲಿಯನ್ ಡಾಲರ್ ಗಳಷ್ಟಾಗಿದೆ. ಹಿಂದಿನ ದಿನದ ಮೌಲ್ಯ 87.9 ಬಿಲಿಯನ್ ಡಾಲರ್ ಆಗಿತ್ತು. ಗೌತಮ್ ಅದಾನಿ 86.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಈ ಮೊತ್ತವು ಹಿಂದಿನ ಪಟ್ಟಿಯಲ್ಲಿ 88.5 ಬಿಲಿಯನ್ ಡಾಲರ್ ಆಗಿತ್ತು. ಒಂದೇ ದಿನದಲ್ಲಿ, ಮುಖೇಶ್ ಅವರ ಸಂಪತ್ತು 1.33 ಬಿಲಿಯನ್ ಡಾಲರ್ ಗೆ ತಲುಪಿತು. ಮತ್ತು 2.16 ಬಿಲಿಯನ್ ಡಾಲರ್ ಅವರ ಖಾತೆಗೆ ಜಮೆಯಾಗಿದೆ. ಇದರೊಂದಿಗೆ ಏಷ್ಯಾದಲ್ಲಿ ನಂ.1 ಸ್ಥಾನಕ್ಕೆ ಏರಿದ ಮುಖೇಶ್ ಮತ್ತೊಮ್ಮೆ ವಿಶ್ವ ರ್ಯಾಂಕಿಂಗ್ ನಲ್ಲಿ ಹತ್ತನೇ ಸ್ಥಾನ ಪಡೆದಿದ್ದಾರೆ.
ಬ್ಲೂಮ್‌ಬರ್ಗ್ ಪಟ್ಟಿಯಲ್ಲಿ, ಅಂಬಾನಿ ಮತ್ತು ಅದಾನಿ ಕ್ರಮವಾಗಿ 10 ಮತ್ತು 11 ನೇ ಸ್ಥಾನದಲ್ಲಿದ್ದರೆ, ಮೊದಯ 100 ರ ಪಟ್ಟಿಯಲ್ಲಿ ಅಜೀಂ ಪ್ರೇಮ್‌ಜಿ ( 33.8 ಬಿಲಿಯನ್ ಡಾಲರ್ ) 38 ನೇ ಸ್ಥಾನ,
ಶಿವನಾಡೋರ್ (29 ಬಿಲಿಯನ್ ಡಾಲರ್) 48 ನೇ ಸ್ಥಾನ,
ರಾಧಾಕಿಶನ್ ದಮಾನಿ (21.2 ಬಿಲಿಯನ್ ಡಾಲರ್) 79 ನೇ ಸ್ಥಾನ,
ಮತ್ತು 82 ನೇ ಸ್ಥಾನದಲ್ಲಿ ಲಕ್ಷ್ಮಿ ಮಿತ್ತಲ್ ( 21.2 ಬಿಲಿಯನ್ ಡಾಲರ್) ಇದ್ದಾರೆ.