ಶಿವಮೊಗ್ಗ: ಮೂಡಾ ಹಗರಣ ರಾಜ್ಯದಲ್ಲಿಯೇ ಬಹಳ ದೊಡ್ಡ ಹಗರಣವಾಗಿ ಸದ್ದು ಮಾಡಿತ್ತು. ಕೋಟ್ಯಾಂತರ ರೂಪಾಯಿ ಅಭಿವೃದ್ಧಿಯ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಇದರ ತನಿಖೆ ನಡೆದು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ. ಆದರೆ ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಚಂದ್ರಶೇಖರ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪತ್ನಿಯನ್ನು ಭೇಟಿಯಾದ ಕೆ ಎಸ್ ಈಶ್ವರಪ್ಪ ಅವರು ಹಣದ ಸಹಾಯ ಮಾಡಿದ್ದಾರೆ.
ಮೃತ ಚಂದ್ರಶೇಖರ್ ಪತ್ನಿಗೆ ಐದು ಲಕ್ಷ ಹಣ ನೀಡಿದ್ದಾರೆ. ಈ ವೇಳೆ ಚಂದ್ರಶೇಖರ್ ಹೆಂಡತಿ ಕಣ್ಣೀರು ಹಾಕಿದರು. ಆಗ ಈಶ್ವರಪ್ಪ ಅವರೇ ಸಮಾಧಾನ ಮಾಡಿದ್ದು, ನೀವೂ ಸ್ವಾಭಿಮಾನಿಗಳು ಎಂಬುದು ನನಗೆ ಗೊತ್ತು. ನಿಮಗೆ ಅಲ್ಪಸ್ವಲ್ಪ ಆದ್ರೂ ಸಹಾಯವಾಗಲಿ ಅಂತಷ್ಟೇ ಈ ಹಣ ನೀಡುತ್ತಿರುವುದು. ತೆಗೆದುಕೊಳ್ಳಿ. ನಮ್ಮನ್ನ ಅಣ್ಣತಮ್ಮಂದಿರು ಅಂತ ತಿಳಿದುಕೊಳ್ಳಿ ಎಂದು ಹಣ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಈಶ್ವರಪ್ಪ ಅವರು, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ, ಚಂದ್ರಶೇಖರ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಅಂತ ಹೇಳಿ ಎಲ್ಲರ ಪರವಾಗಿ ಈ ಹಣವನ್ನು ನೀಡಿದ್ದೇವೆ. ಸರ್ಕಾರ ಏನು ಘೋಷಣೆ ಮಾಡಿದೆ ಆ ಹಣವನ್ನು ಸರ್ಕಾರ ನೀಡಬೇಕು. ನಮ್ಮ ಪರವಾಗಿ ಈ ಹಣವನ್ನು ನೀಡುತ್ತಿದ್ದೇವೆ. ಸಮಾಜದ ಋಣವನ್ನು ನಾವೂ ತೀರಿಸುತ್ತಿದ್ದೇವೆ. ಅವತ್ತು ಹೇಳಿದ್ರಿ ನೀವೂ ಕೊಡದೆ ಇದ್ದರೂ ನಾವೂ ಹೇಗೋ ಜೀವನ ಮಾಡಿಕೊಳ್ಳುತ್ತೇವೆ ಅಂತ.
ಸರ್ಕಾರದ ಋಣವನ್ನು ಅವರು ಆದಷ್ಟು ಬೇಗ ತೀರಿಸಬೇಕು. ತೀರಿಸದೆ ಇದ್ದಲ್ಲಿ ಹೇಗೆ ಎಚ್ಚರಿಕೆ ಕೊಡಬೇಕೋ ಆ ರೀತಿ ಕೊಡುತ್ತೇವೆ. ನಿಮಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೇವೆ ಎಂದು ಚಂದ್ರಶೇಖರ್ ಪತ್ನಿಗೆ ಹಣ ಕೊಟ್ಟು, ಹಾರೈಸಿದ್ದಾರೆ. ಈ ವೇಳೆ ಈಶ್ವರಪ್ಪ ಪರವಾಗಿ ಘೋಷಣೆಗಳು ಕೇಳಿ ಬಂದಿವೆ ಜೈ ಈಶ್ವರಪ್ಪ ಎಂದು ಘೋಷಣೆ ಕೂಗಿದ್ದಾರೆ.