ಬೆಂಗಳೂರು: ಇಂದು ಮೂಡಾ ಕೇಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಾದ ಮಂಡನೆ ನಡೆಯುತ್ತಿದೆ. ಸಿಬಿಐ ಪ್ರಕರಣ ಕೋರಿರುವಂತ ಅರ್ಜಿಯಲ್ಲಿ ಕೇವಲ ನೋಟೀಸ್ ಜಾರಿಯಾಗಿದೆ. ಅದನ್ನ ತಡೆ ಕೋರಿದೆ ಅಷ್ಟೇ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರಾದ ಕೆ.ಜಿ.ರಾಘವನ್ ವಾದ ಮಂಡಿಸುತ್ತಿದ್ದಾರೆ. ಯಾರ ವಿರುದ್ಧ ತನಿಖೆಯಾಗಬೇಕೆಂದು ಹೈಕೋರ್ಟ್ ತೀರ್ಮಾನಿಸಿಲ್ಲ. ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ನೋಟೀಸ್ ನೀಡಿದೆ. ಹೀಗಾಗಿ ಇವರ ಮೇಲ್ಮನವಿ ಸೂಕ್ತ ಅಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರಾದ ಕೆ.ಜಿ.ರಾಘವನ್ ವಾದ ಮಂಡಿಸುತ್ತಿದ್ದಾರೆ.
ಇನ್ನು ಹೈಕೋರ್ಟ್ ಮುಖ್ಯ ನ್ಯಾ.ಎನ್.ವಿ. ಅಂಜಾರಿಯಾ ಅವರು, ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ಆಗಲ್ಲ. ಅಗತ್ಯ ಬಿದ್ದರೆ ನೀವೇ ನೇರವಾಗಿ ಹೋಗಿ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಬಹುದು ಎಂಬ ಸಲಹೆಯನ್ನು ನೀಡಿದ್ದಾರೆ.
ಹೈಕೋರ್ಟ್ ನಲ್ಲಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದವನ್ನು ಕೂಲಂಕುಶವಾಗಿ ಗಮನಿಸಲಾಗಿದೆ. ಪ್ರತಿವಾದಿಗಳಿಗೆ ನೋಟೀಸ್ ಕೊಡಬೇಕೆಂದು ವಕೀಲರು ಮನವಿ ಮಾಡಿಕೊಂಡ ಕೂಡಲೇ ನ್ಯಾಯಾಧೀಶರು ಕೂಡ ಪ್ರತಿವಾದಿಗಳಿಗೆ ನೋಟೀಸ್ ಕೊಡಲು ಆದೇಶ ನೀಡುತ್ತಾರೆ. ಇಲ್ಲಿ ದೇವರಾಜು ಪರ ವಕೀಲರಾದ ದುಷ್ಯಂತ್ ಅವರು ವಾದ ಮಂಡಿಸಿದ್ದಾರೆ. ವಿಭಾಗೀಯ ಪೀಠದಲ್ಲಿ ಈಗಾಗಲೇ ವಿಚಾರಣೆ ನಡೆಯುತ್ತಿದೆ. ಅದಕ್ಕೆ ತಡೆ ಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಸಿಬಿಐ ತನಿಖೆ ಕೋರಿ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಇನ್ನು ಏಕಸದಸ್ಯ ಪೀಠದಲ್ಲಿ ರಾಜ್ಯಪಾಲರ ಕ್ರಮವನ್ನು ಪ್ರಶ್ನೆ ಮಾಡಲಾಗಿತ್ತು. ಅವರು ಕೊಟ್ಟಂತ ಅನುಮತಿ ಸರಿ ಇದೆಯೋ ತಪ್ಪಿದೆಯೋ ಎಂಬುದರ ಬಗ್ಗೆ ತೀರ್ಪು ಕೊಡಬೇಕಿತ್ತು. ಆದರೆ ನನ್ನ ಕಕ್ಷಿದಾರ ದೇವರಾಜು ವಿರುದ್ಧ ಅವರು ತುಇರ್ಪು ಕೊಟ್ಟಿದ್ದಾರೆ. ನನ್ನ ಕಕ್ಷಿದಾರನಿಗೂ, ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ದೇಚರಾಜು ವಾದವನ್ನೇ ಆಲಿಸದೆ ತೀರ್ಪು ಕೊಟ್ಟಿರುವ ಕಾರಣ ನಾವೂ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ದೇವರಾಜು ಪರ ವಕೀಲರು ವಾದ ಮಂಡಿಸಿದ್ದಾರೆ.