ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಉಪಾಧ್ಯಕ್ಷರಾಗಿ ಚಿತ್ರದುರ್ಗದ ಶ್ರೀಮತಿ ಆರ್.ರಜನಿ ಲೇಪಾಕ್ಷ ಅವಿರೋಧ ಆಯ್ಕೆ

1 Min Read

 

ಸುದ್ದಿಒನ್, ಬೆಂಗಳೂರು, ಅಕ್ಟೋಬರ್.13 : ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಉಪಾಧ್ಯಕ್ಷರಾಗಿ ಚಿತ್ರದುರ್ಗದ  ಶ್ರೀಮತಿ ಆರ್.ರಜನಿ ಲೇಪಾಕ್ಷ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಕೇಂದ್ರ ಕಛೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಆರ್.ರಜನಿ ಲೇಪಾಕ್ಷ, ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾ ಅಧಿಕಾರಿಯಾಗಿದ್ದ ಹಾಗೂ ಹಿರಿಯ ನಿರೀಕ್ಷಕರು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, 4 ನೇ ವಲಯ ಬೆಂಗಳೂರು ನಗರ ಜಿಲ್ಲೆಯ ಶಶಿಧರ ಡಿ. ಪ್ಯಾಟಿಸಿಂಗಿ ಅವರು ಘೋಷಿಸಿದರು.

ಇದೇ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ, ಈರಣ್ಣ ಮಾನ್ವಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್ ಆಯ್ಕೆಯಾಗಿದ್ದಾರೆ.

ಆಯ್ಕೆಗೆ ಸಹಕರಿಸಿದ ಬಿ.ಜಿ.ಗೋವಿಂದಪ್ಪ , ಶಾಸಕರು ಹೊಸದುರ್ಗ ಮತ್ತು ಶ್ರೀ ಕನಕ ಗುರುಪೀಠ ಆಡಳಿತಾಧಿಕಾರಿಗಳು, ಸುಬ್ಬಣ್ಣ, ನಿಕಟಪೂರ್ವ ರಾಜ್ಯಾಧ್ಯಕ್ಷರು, ವೆಂಕಟೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ರಾಮಚಂದ್ರಪ್ಪನವರು, ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲೆಯ ಬಿ.ಟಿ.ಜಗದೀಶ್, ನಿಕಟಪೂರ್ವ ಹಿರಿಯ ಉಪಾಧ್ಯಕ್ಷರು, ಹಾಗೂ ಡಾ.ಎಂ.ಹೆಚ್.ಕೃಷ್ಣ ಮೂರ್ತಿ, ಡಾ.ಸಿದ್ದರಾಮಪ್ಪ, ಜಿಲ್ಲೆಯ ಸಮಾಜದ ಬಂಧುಗಳು ಮತ್ತು ರಾಜ್ಯದ ಎಲ್ಲಾ ನಿರ್ದೇಶಕರುಗಳಿಗೆ ಸಮಾಜದ ಬಾಂಧವರಿಗೆ ಶ್ರೀಮತಿ ಆರ್.ರಜನಿ ಲೇಪಾಕ್ಷ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಮಾಜದ ಹಿರಿಯರ ಸಹಕಾರದಿಂದ ಮತ್ತು ಎಲ್ಲಾ ನಿರ್ದೇಶಕರ ಮಾರ್ಗದರ್ಶನ ಪಡೆದು ಕಾರ್ಯನಿರ್ವಹಿಸುವುದಾಗಿ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಆರ್.ರಜನಿ ಲೇಪಾಕ್ಷ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *