ಹೊಸದಾಗಿ ಏನನ್ನಾದರೂ ನೋಡಿದರೆ ಅದರ ಬಗ್ಗೆ ಕುತೂಹಲ ಬರುವುದು ಸಹಜ. ಕುತೂಹಲವಿದ್ದಾಗ ಮಾಡಬೇಡಿ ಎಂಬ ಕೆಲಸವನ್ನೇ ಮಾಡುವುದು ಹೆಚ್ಚು. ಇದೀಗ ಸಂಸದ ಸೂರ್ಯ ಅವರು ಅಂತದ್ದೇ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಮಾಡಿದ ಎಡವಟ್ಟಿನಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ವಿಮಾನ ತಡವಾಗಿರುವ ಘಟನೆ ನಡೆದಿದೆ.
ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ತುರ್ತು ದ್ವಾರವನ್ನು ತೆಗೆದಿದ್ದು, ಎರಡು ಗಂಟೆಗಳ ಕಾಲ ವಿಮಾನ ತಡವಾಗಿದೆ. ಆದರೆ ಈ ಘಟನೆ ನಡೆದಿರುವುದು ಡಿಸೆಂಬರ್ 10ರಂದು. ಚೆನ್ನೈ ಏರ್ಪೋರ್ಟ್ ನಲ್ಲಿ ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಏರ್ ಇಂಡಿಯಾ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವುದಕ್ಕೆ ಸೂಚನೆ ನೀಡಿದೆ.
This is a very serious offense. Quite surprised that @IndiGo6E did not report to DGCA.
Did the MP use good offices to suppress this news?Emergency exit unlocked on-board Indigo flight, co-passenger claims it was BJP MP Tejasvi Surya. https://t.co/VVFSiHhYgZ
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 17, 2023
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿರುವ ಪ್ರಕಾರ, ವಿಮಾನದ ಒಳಗೆ ಕ್ಯಾಬಿನ್ ಸಿಬ್ಬಂದಿಗಳು ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುತ್ತಿದ್ದರು. ತುರ್ತು ಪರಿಸ್ಥಿತಿ ಬಂದಾಗ ಅನುಸರಿಸಬೇಕಾದ ಮಾಹಿತಿಯನ್ನು ನೀಡುತ್ತಿದ್ದರು. ಸಂಸದ ತೇಜಸ್ವಿ ಸೂರ್ಯ ಅವರು ತುರ್ತು ದ್ವಾರದ ಬಳಿಯೇ ಕೂತಿದ್ದರು. ಸಿಬ್ಬಂದಿಗಳು ಹೇಳಿದ್ದನ್ನು ಅವರು ಸಹ ಆಲಿಸುತ್ತಿದ್ದರು. ಆದರೆ ಕೆಲವೇ ನಿಮಿಷಗಳ ಬಳಿಕ ಅವರೇ ದ್ವಾರದ ಲಿವರ್ ಎಳೆದಿದ್ದಾರೆ. ತಕ್ಷಣ ತುರ್ತು ನಿರ್ಗಮನದ ದ್ವಾರ ತೆರೆದುಕೊಂಡಿತ್ತು. ಪ್ರಯಾಣಿಕರನ್ನೆಲ್ಲಾ ಬಸ್ಸಿನಲ್ಲಿ ಕುಳಿತುಕೊಳ್ಳಲು ಹೇಳಿದರು. ಎರಡು ಗಂಟೆಗಳ ಬಳಿಕ ವಿಮಾನ ಹೊರಟಿತ್ತು ಎಂದು ತಿಳಿಸಿದ್ದಾರೆ.