ಮೈಸೂರು: ಸಿದ್ದರಾಮಯ್ಯ ಅವರ ಮಾಂಸ ತಿಂದು ಬರಬೇಡಿ ಎಂದು ಯಾವ ದೇವರು ಹೇಳಿದ್ದಾರೆ. ಮಾಂಸಹಾರ ಅವರವರ ಹಕ್ಕು ಎಂದು ಹೇಳಿದ್ದರು. ಮಾಂಸ ತಿಂದು ಬರಬೇಡಿ ಅಂತ ಯಾವ ದೇವರು ಹೇಳಿಲ್ಲ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಇದೆ ವೇಳೆ ಹಂದಿ ಮಾಂಸವನ್ನು ಎಳೆದು ತಂದಿದ್ದಾರೆ. ಹಂದಿ ಮಾಂಸ ತಿನ್ನಬೇಡಿ ಅಂತ ಯಾವ ದೇವರೂ ಹೇಳಿಲ್ಲ. ಜಮೀರ್ ಮತ್ತು ಅವರ ಬೆಂಬಲಿಗರನ್ನು ಹಂದಿ ತಿನ್ನಲು ಹೇಳಿ ಎಂದು ಚಾಲೆಂಜ್ ಹಾಕಿದ್ದಾರೆ.
ಆದರೆ ಅದನ್ನು ಹೇಳುವುದಕ್ಕೆ ನಿಮಗೆ ಧೈರ್ಯವಿಲ್ಲ. ಅವರ ದೇವರು ದನದ ಮಾಂಸವನ್ನಷ್ಟೇ ತಿಂದುಕೊಂಡು ಬನ್ನಿ ಅಂತ ಹೇಳಿದೆಯಾ. ಇಲ್ಲ ಅಲ್ವಾ, ಹಂದಿ ಮಾಂಸ ಭಕ್ಷಣೆ ಮಾಡಬಾರದು ಅಂತ ಇದೆಯಾ. ಹಂದಿ ಮಾಂಸ ಭಕ್ಷಣೆ ಮಾಡಬಾರದು ಅಂತ ಏನು ಇದೆಯಾ ಅಂತ ಜಮೀರ್ ಹೇಳಲಿ ನೋಡೋಣಾ. ಅವರಿಗೆ ಮಾರ್ಗದರ್ಶನ ಮಾಡಿ ನೋಡೋಣಾ. ಅದನ್ನು ನೀವೂ ಮಾಡುವುದಕ್ಕೆ ಧೈರ್ಯ ಇಲ್ಲ ನಿಮಗೆ. ನೀವೂ ಕೇವಲ ಹಿಂದೂ ಧರ್ಮದ ವಿರೋಧಿ, ಹಿಂದೂ ಧರ್ಮವನ್ನು ಒಡೆಯುವ ಕೆಲಾವನ್ನಷ್ಟೇ ಮಾಡುತ್ತಿದ್ದೀರಿ.
ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ತಾಯಿಯ ಭಕ್ತೆ. ಮಾಂಸ ತಿಂದು ಬರ್ತಾರಾ..? ನಿಮ್ಮವರನ್ನೇ ಕೇಳಿ ಅವರು ಮಾಂಸ ತಿಂದು ಬರ್ತಾರಾ..? ಇಲ್ವಾ ಎಂದು. ಹಾಗಾದ್ರೆ ಸಿದ್ದರಾಮೇಶ್ವರ ಜಾತ್ರೆಗೆ ಯಾಕೆ ಸಿಹಿ ಊಟ ಹಾಕಿಸಿದ್ರಿ, ಮಾಂಸದೂಟ ಹಾಕಿಸಬಹುದಿತ್ತಲ್ಲ. 2017ರಲ್ಲಿ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ ತಿಂದು ನಂದುಗೆ ಪುಷ್ಪಾರ್ಚನೆ ಮಾಡಿದ್ರಿ, ಆ ನಂತರ ಆ ತಾಯಿ ಇವರಿಗೆ ಪುಷ್ಪಾರ್ಚನೆ ಮಾಡಲು ಯಾವತ್ತು ಅವಕಾಶವನ್ನೇ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ.