ಸಿಧಿ (ಮಧ್ಯಪ್ರದೇಶ) : ಕಷ್ಟ ಏನೇ ಇರ್ಲಿ ತಾನೆತ್ತ ಮಕ್ಕಳನ್ನ ಸುಖವಾಗಿಡಲು ಪ್ರತಿಯೊಬ್ಬ ತಾಯಿಯೂ ಬಯಸುತ್ತಾಳೆ. ತಾನು ಹಸಿವನಲ್ಲಿದ್ದರು ಮಕ್ಕಳ ಹೊಟ್ಟೆ ತುಂಬಿಸುತ್ತಾಲಕೆ. ತಾನು ಬರಿಗಾಲಲ್ಲಿ ನಡೆದರೂ ಮಕ್ಕಳಿಗೆ ಚಪ್ಪಲಿ ಕೊಡ್ತಾಳೆ. ತಾನೂ ಬಿಸಿಲು ಮಳೆಯಲ್ಲಿ ನೆನೆದರೂ ಮಕ್ಕಳ ತಲೆ ಮೇಲೆ ಸೆರಗು ಹಾಕುತ್ತಾಳೆ. ಇದು ತಾಯಿಯ ಹೃದಯ ಶ್ರೀಮಂತಿಕೆ. ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಅದೇಗೆ ಜೋಪಾನಾ ಮಾಡ್ತಾಳಾ ಹುಟ್ಟಿದ ಮೇಲೂ ಅಷ್ಟೇ ಜೋಪಾನ ಮಾಡ್ತಾಳೆ. ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಅಲ್ಲೊಬ್ಬ ತಾಯಿ ಮಗುವಿನ ಪ್ರಾಣ ಉಳಿಸಲು ಚಿರತೆಯ ಬಾಯಿಗೆ ಕೈ ಹಾಕಿದ್ದಾಳೆ.
तेंदुए के हमले से अपने बेटे को बचाने वाली साहसिक मां और पुत्र के इलाज का खर्च सरकार वहन करेगी। उनके जीवन व स्वास्थ्य की चिंता अब प्रदेश की जिम्मेदारी है। काल के हाथों अपने कलेजे के टुकड़े को सुरक्षित बचाने की घटना अद्भुत व हृदयस्पर्शी है। साहसिक मां को मैं शत-शत प्रणाम करता हूं। https://t.co/ktxJCCWDAf
— Shivraj Singh Chouhan (@ChouhanShivraj) December 1, 2021
ತನ್ನ ಮಕ್ಕಳೆಲ್ಲಾ ಆಟವಾಡುತ್ತಿರುವಾಗ ಚಿರತೆಯೊಂದು ಏಕಾಏಕಿ ದಾಳಿ ಮಾಡಿದೆ. ಅದರಲ್ಲಿ ಒಂದು ಮಗುವನ್ನ ಹೊತ್ತೊಯ್ದಿದೆ. ಇದನ್ನ ಗಮನಸಿದ ಆ ತಾಯಿ ತಕ್ಷಣ ಎಚ್ಚೆತ್ತುಕೊಂಡಿದ್ದಾಳೆ. ತನ್ನ ಉಳಿದ ಮಕ್ಕಳನ್ನ ಗುಡಿಸಲಿನ ಒಳಗೆ ಬಿಟ್ಟು ಬೀಗ ಹಾಕಿದ್ದಾಳೆ.
ಬಳಿಕ ಚಿರತೆ ಹೊತ್ತೊಯ್ದ ಕಡೆಗೆ ಓಡಿದ್ದಾಳೆ. ಚಿರತೆಯೊಂದಿಗೇನೆ ಹೋರಾಟ ಮಾಡಿದ್ದಾಳೆ. ಚಿರತೆಯ ಬಾಯಿಗೇನೆ ಕೈ ಹಾಕಿ ಮಗುವನ್ನ ರಕ್ಷಿಸಿಕೊಂಡಿದ್ದಾಳೆ. ಮಗು ಹಾಗೂ ತಾಯಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಈ ಬಗ್ಗೆ ಬರೆದು, ಫೋಟೋ ಶೇರ್ ಮಾಡಿದ್ದಾರೆ.