ರಾಮನಗರ: ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರ ನಡುವೆಯೇ ಮಾರಾಮಾರಿಯಂತ ಗಲಾಟೆ ನಡೆದು ಹೋಗಿದೆ. ಸಂಸದ ಡಿ ಕೆ ಸುರೇಶ್ ಮತ್ತು ಸಚಿವ ಅಶ್ವಥ್ ನಾರಾಯಣ್ ಬೆಂಬಲಗರು ಗಲಾಟೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಂಸದ ಡಿ ಕೆ ಸುರೇಶ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರಾದ ಮೇಲೆ ಎಲ್ಲಾ ಕೆಲಸವನ್ನ ನಾನೇ ಮಾಡಿದ್ದೇನೆ ಎಂದರೆ ಹೇಗೆ..? ಸಚಿವರು ಸವಾಲಿಗೆ ಕರೆದಾಗ ನಾನು ಸುಮ್ಮನೆ ಕೂರಲು ಆಗೋದಿಲ್ಲ. ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜನರ ಎದುರಿಗೆ ಆಕ್ರೋಶವಾಗಿ ಮಾತನಾಡಿ ಸವಾಲಿಗೆ ಕರೆದರೆ ಸುಮ್ಮನೆ ಕೂರೋದಕ್ಕೆ ಆಗಲ್ಲ. ಇದು ಗುಂಡಾ ವರ್ತನೆ ಅಲ್ಲ. ಅವರು ಹೇಳಿದ್ದನ್ನು ಕೇಳಿಸಿಕೊಂಡು ಸಿಎಂ ಎದುರೇ ಉತ್ತರ ನೀಡಿದ್ದೇನೆ.
ಇದು ಪಕ್ಷದ ಕಾರ್ಯಕ್ರಮ ಅಲ್ಲ. ಸರ್ಕಾರಿ ಕಾರ್ಯಕ್ರಮ. ಪ್ರತಿಮೆ ನಿರ್ಮಾಣಕ್ಕೆ ಸಂಸದರಾಗಿ ಹಣ ಬಿಡುಗಡೆ ಮಾಡಲು ಎಷ್ಟು ಕಷ್ಟ ಪಟ್ಟಿದ್ದೀವಿ. ಪ್ರತಿಮೆ ಅನಾವರಣಕ್ಕೆ ಕೂಡ ತೊಡಕುಗಳಾಗಿದ್ದವು. ಅದನ್ನು ಸಮಿತಿ ರಚನೆ ಮಾಡಿ ಬಗೆಹರಿಸಿದ್ದೇವೆ ಎಂದಿದ್ದಾರೆ.