ಬೆಂಗಳೂರು: ಮಂಡ್ಯದ ಕಾಲೇಜಿನಲ್ಲಿ ಹುಡುಗರೆಲ್ಲಾ ಜೈಶ್ರೀರಾಮ್ ಎಂದು ಕೂಗಿದಾಗ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾಹು ಅಜ್ಬರ್ ಎಂದು ಕೂಗಿದ್ದಳು. ಇದಕ್ಕೆ ಮುಸ್ಲಿಂ ನ ಸಂಘಟನೆಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ ಇತ್ತೀಚೆಗೆ ಮುಸ್ಕಾನ್ ಬಗ್ಗೆ ಆಲ್ ಖೈದಾ ಉಗ್ರ ಸಂಘಟನೆ ಕೂಡ ಹಾಡಿ ಹೊಗಳಿತ್ತು. ಮುಸ್ಕಾನ್ ಮೇಲೆ ಕವನವನ್ನೆ ಬರೆದಿದ್ದರು.
ಈ ಸಂಬಂಧ ಸಂಸದ ಅನಂತ್ ಕುನಾರ್ ಹೆಗ್ಡೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಮುಸ್ಕಾನ್ ಹಿಂದೆ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆ ಇದೆ. ಈಕೆ ಅಷ್ಟು ಧೈರ್ಯವಾಗಿ ಕೂಗುತ್ತಾಳೆ ಎಂದರೆ ಆಕೆಯ ಹಿಂದೆ ಕಾಣದ ಕೈಗಳು ಇದೆ. ಹೀಗಾಗಿ ಆಕೆಯನ್ನು ತನಿಖೆ ನಡೆಸಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗ್ದೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮುಸ್ಕಾನ್ ವಿರುದ್ಧ ತನಿಕೆಗೆ ಒತ್ತಾಯಿಸಿದ್ದಾರೆ.
ಯಾವಾಗ ಆಲ್ ಖೈದಾ ಉಗ್ರ ಯಾವಾಗ ಮುಸ್ಕಾನ್ ಳನ್ನು ಹೊಗಳಿದ್ದಾರೋ ಅಂದಿನಿಂದ ಸಾಕಷ್ಟು ಜನ ಮುಸ್ಕಾನ್ ವಿಚಾರದಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತಿದ್ದಾರೆ. ಅತ್ತ ಶೋಭಾ ಕರಂದ್ಲಾಜೆ ಕೂಡ ತನಿಖೆಗೆ ಒತ್ತಾಯಿಸಿದ್ದಾರೆ. ಸಂಸದೆ ಸುಮಲತಾ ಕೂಡ ತನಿಖೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅನಂತ್ ಕುನಾರ್ ಹೆಗ್ಡೆ ಅವರ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅನಂತ್ ಕುಮಾರ್ ಹೆಗ್ಡೆ ಬಳಿ ಏನು ಮಾಹಿತಿ ಇದೆ ಅದನ್ನು ತಿಳಿದುಕೊಂಡು, ಆ ಬಳಿಕ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.