ಮೋಟರ್ ಬೈಕ್‌ ಕಳ್ಳನ ಬಂಧನ : 17.5 ಲಕ್ಷ ಮೌಲ್ಯದ 25 ಬೈಕುಗಳು ವಶ : ಕುರುಗೋಡು ಪೊಲೀಸರ ಕಾರ್ಯಾಚರಣೆ

1 Min Read

 

ಸುದ್ದಿಒನ್, ಕುರುಗೋಡು. ಸೆ.11: ಹಳ್ಳಿಗಳಲ್ಲಿ ಕಳ್ಳತನವಾಗಿದ್ದ ಬೈಕ್‌ಗಳ ಕಳ್ಳನನ್ನು ಬಂಧಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಭಂಡಾರು, ಆರೋಪಿ ಬಳ್ಳಾರಿಯ ಶಾಂತಿನಗರ ನಿವಾಸಿ ಶಾಮ್ ಸುಂದರ್‌ನನ್ನು ಬಂಧಿಸಿ ಅವನಿಂದ 17.5 ಲಕ್ಷ ಮೌಲ್ಯದ 25 ಬೈಕ್‌ಗಳನ್ನು ವಶಪಡಿಸಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿ ಬಳ್ಳಾರಿ ಕೌಲ್‌ಬಜಾರ್ ಠಾಣೆ ವ್ಯಾಪ್ತಿಯಲ್ಲಿ ನಡೆದ 3 ಬೈಕ್‌ಕಳುವು ಪ್ರಕರಣದಲ್ಲಿ ಬಂಧಿತನಾಗಿದ್ದ. ಕುರುಗೋಡು ಸುತ್ತಮುತ್ತ ನಡೆದ ಬೈಕ್‌ಕಳ್ಳತನ ಪ್ರಕರಣಗಳಲ್ಲಿ ಈತನ ಕೈವಾಡ ಇರಬಹುದು ಎಂದು ಶಂಕಿಸಿದ್ದ ಪೊಲೀಸರು ಬಂಧನಕ್ಕೆ ತಂಡ ರಚಿಸಿದ್ದರು. ಕಳ್ಳತನ ಮಾಢಿದ್ದ ಬೈಕ್‌ಗಳನ್ನು ತಾಲೂಕಿನ ರ‍್ವಾಯಿ ಗ್ರಾಮದ ಕರೀಮ್ ಎನ್ನುವ ವ್ಯಕ್ತಿಗೆ ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದ. ಪೊಲೀಸರಿಗೆ ವಿಷಯ ತಿಳಿದ ನಂತರ ತನಿಖೆ ಪ್ರರಂಭಿಸಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ತಿಳಿಸಿದರು.

ವೃತ್ತ ನಿರೀಕ್ಷಕ ಜಯಪ್ರಕಾಶ್, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಿ. ತನಿಖಾ ವಿಭಾಗದ ಪಿಎಸ್‌ಐ ಲೋಕರಾಜ್, ಸಿಬ್ಬಂದಿ ವಸಂತ ಕುಮಾರ್, ನವೀನ್, ರಾಜಶೇಖರ್, ರೇವಣಸಿದ್ದಪ್ಪ ಮತ್ತು ಅಂಜಿನಿ ತಂಡದಲ್ಲಿ ಭಾಗವಹಿಸಿದ್ದರು.
ಡಿವೈಎಸ್ಪಿ ಪ್ರಸಾದ್ ಗೋಖಲೆ ಮತ್ತು ಸಿಬ್ಬಂದಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *