ಚಿತ್ರದುರ್ಗದಲ್ಲಿ 1.5 ಕೋಟಿ ಹಣ ದರೋಡೆ : ತಡವಾಗಿ ಪ್ರಕರಣ ಬೆಳಕಿಗೆ

1 Min Read

 

ಸುದ್ದಿಒನ್, ಚಿತ್ರದುರ್ಗ : ಬೈಕ್ ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ 1.5 ಕೋಟಿ ದರೋಡೆ ಮಾಡಿರುವ ಘಟನೆ ತಾಲೂಕಿನ ಈಚಲನಾಗೇನಹಳ್ಳಿಯಲ್ಲಿ ನಡೆದಿದೆ.

ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಹಣ ಸಾಗಿಸುತ್ತಾ ಇದ್ದರು. ಹೈದ್ರಾಬಾದ್ ನಿಂದ ಅಡಕೆ ವ್ಯಾಪಾರದ ಹಣವನ್ನು ಊರಿಗೆ ತರಲಾಗುತ್ತಿತ್ತು. ಈ ವೇಳೆ ಆರು ಜನ ದುಷ್ಕರ್ಮಿಗಳು ಈಚಲನಾಗೇನಹಳ್ಳಿ ಬಳಿ ಅಡ್ಡ ಹಾಕಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ 1 ಕೋಟಿ 50 ಲಕ್ಷ ದರೋಡೆ ಮಾಡಿ ಪರಾರಿಯಾಗಿದ್ದಾರೆ. 

ಡಿಸೆಂಬರ್ 4 ರಂದು ಈ ಘಟನೆ ನಡೆದಿತ್ತು. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಈಚಲನಾಗೇನಹಳ್ಳಿ ಮಾರ್ಗವಾಗಿ ಹೊಸಹಳ್ಳಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು,  ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *