ಬೆಂಗಳೂರು: ಇತ್ತೀಚೆಗೆ ದರ್ಶನ್ ಫ್ಯಾನ್ಸ್ ನಡುವೆ ಬೇಸರದ ಮಾತುಗಳು ಜೇಳಿ ಬರ್ತಾ ಇರೋದು ಗೊತ್ತೇ ಇದೆ. ನಟಿ ರಮ್ಯಾ ಅವರಿಗೆ ಕೆಟ್ಟ ಕೆಟ್ಟ ಕಮೆಂಟ್ಸ್ ಗಳನ್ನ ಹಾಕಿದ್ದವರ ವಿರುದ್ಧ ದೂರು ಕೂಡ ದಾಖಲಾಗಿದೆ. ಇದೀಗ ಈ ಸಂಬಂಧ ಮಾಜಿ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಅಂತ ಅಲ್ಲ ಜನಸಾಮಾನ್ಯರಿಗೆ ಆಗಲಿ, ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಆ ರೀತಿಯ ಕಮೆಂಟ್ ಗಳನ್ನ ಮಾಡಬಾರದು. ಸೋಷಿಯಲ್ ಮೀಡಿಯಾ ನಾನು ನೋಡಿಲ್ಲ. ಯಾರು ಮಾಡಿದ್ದಾರೆ ಅನ್ನೋದು ಕೂಡ ಗೊತ್ತಿಲ್ಲ. ನ್ಯೂಸ್ ನಲ್ಲಿ ಏನು ಬರ್ತಾ ಇದೆ ಅದನ್ನ ನೋಡಿದ್ದೀನಿ. ಅವರು ಈಗಾಗಲೇ ದೂರನ್ನು ಕೂಡ ಕೊಟ್ಟಿದ್ದಾರೆ. ಪೊಲೀಸರು ತನಿಖೆಯ ಬಳಿಕ ತಪ್ಪು ಮಾಡಿದವರಿಗೆ ಖಂಡಿತ ಕ್ರಮ ತೆಗೆದುಕೊಳ್ಳುತ್ತಾರೆ.
ಆದರೆ ಎಲ್ಲರಿಗೂ ಅಂದ್ರೆ ಜನ ಸಾಮಾನ್ಯರಿಗೂ ಇದೇ ರೀತಿ ಸ್ಪಂದಿಸ್ತಾರಾ..? ಸರ್ಕಾರ ಇರಲಿ, ಸೈಬರ್ ಕ್ರೈಂ ಪೊಲೀಸರಿರಲಿ ಇದೇ ರೀತಿ ಸ್ಪಂದಿಸೋದಾದ್ರೆ ಸ್ವಾಗತಾರ್ಹ. ಯಾಕಂದ್ರೆ ನ್ಯಾಯ ಅನ್ನೋದು ಎಲ್ಲರಿಗೂ ಸಿಗಬೇಕಾದದ್ದು. ಈಗ ನನ್ನ ವಿಷಯವನ್ನೇ ತೆಗೆದುಕೊಳ್ಳಿ ಈ ಆನ್ಲೈನ್ ಟ್ರೋಲಿಂಗ್ ಅನ್ನೋದು ಹೊಸದೇನು ಅಲ್ಲ. ಮಹಿಳೆಯರ ಬಗ್ಗೆ ಕೀಳುತನದ ಮಾತುಗಳನ್ನ ಐದಾರು ವರ್ಷದಿಂದ ನಾನು ಫೇಸ್ ಮಾಡಿ ಸಾಕಾಗಿ ಹೋಗಿದ್ದೀನಿ. ನನ್ನ ಮೇಲೂ ಫಿಸಿಕಲಿ ಹಲ್ಲೆ ನಡೆದಿತ್ತು. ಕೆ ಆರ್ ನಗರದಲ್ಲಿ ಖುದ್ದಾಗಿ ದೂರು ನೀಡಿದ್ದೆ ಈವರೆಗೂ ಅದಕ್ಕೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಇಂಥ ವಿಷಯಗಳನ್ನ ನಡೆಯದೆ ಇರೋದಕ್ಕೆ ಸೋಷಿಯಲ್ ಮೀಡಿಯಾ ಯಾವುದಕ್ಕೆ, ಎಷ್ಟು ಬಳಸಬೇಕು ಅನ್ನೋದನ್ನ ಯುವ ಜನತೆ ಕೂಡ ಯೋಚಿಸಬೇಕು.
ಭಾವುಕರಾಗಿ, ನಮ್ಮವರನ್ನ ಇವರು ಟಾರ್ಗೆಟ್ ಮಾಡಿದ್ದಾರೆ, ಅವರ ಬಗ್ಗೆ ಈ ರೀತಿ ಮಾತನಾಡಬೇಕು ಅಂತ ಹೋದ್ರೆ ಅವರ ಲೈಫ್ ನ ಅವರು ಹಾಳುಮಾಡಿಕೊಂಡತೆ ಆಗುತ್ತೆ. ನಾನು ಪ್ರತಿಯೊಬ್ಬರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಟಾರ್ಗೆಟ್ ಮಾಡುವಾಗ ನಿಮ್ಮ ಜೀವನದ ಬಗ್ಗೆ ಒಂದು ಕ್ಷಣ ಯೋಚಿಸಿ ಎಂದು ಬುದ್ಧಿ ಹೇಳಿದ್ದಾರೆ.




