ಬೆಂಗಳೂರು; ವಿರೋಧ ಹೆಚ್ಚಾಗುತ್ತಲೆ, ರಕ್ಷಕ್ ಮುಖಕ್ಕೆ ಮಸಿ ಬಳಿಯುತ್ತೇವೆಂದೆಲ್ಲಾ ಮಾತುಗಳು ಬಂದ ಮೇಲೆ ಈಗ ಕ್ಷಮೆ ಕೇಳಿದ್ದಾರೆ. ಚಾಮುಂಡೇಶ್ವರಿ ಭಕ್ತರಿಗೆ ರಕ್ಷಕ್ ಬುಲೆಟ್ ಕ್ಷಮೆ ಕೇಳಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಹೇಳಿದ್ದ ಡೈಲಾಗ್ ನಿಂದ ರಕ್ಷಕ್ ಬುಲೆಟ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಕಡೆಗೂ ಚಾಮುಂಡೇಶ್ವರಿ ಭಕ್ತರಿಗೆ ಕ್ಷಮೆಯಾಚಿಸಿದ್ದಾರೆ. ಹಾಗಾದ್ರೆ ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ ಎಂಬ ಶೋ ನಡೀತಾ ಇದೆ. ಅದರಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲಾ ಜೋಡಿಯಾಗಿದ್ದಾರೆ. ಹುಡುಗಿಯನ್ನ ಇಂಪ್ರೆಸ್ ಮಾಡಬೇಕಾದ ಟಾಸ್ಕ್ ಗಳು ಅಲ್ಲಿರುತ್ತವೆ. ಅಂದು ದರ್ಶನ್ ಅವರ ಬುಲ್ ಬುಲ್ ಸಿನಿಮಾದ ದೃಶ್ಯವನ್ನ ರಿಕ್ರಿಯೇಟ್ ಮಾಡಲಾಗಿತ್ತು. ಆದರೆ ಸಿನಿಮಾದಲ್ಲಿ ಇಲ್ಲದೆ ಇರುವ ಡೈಲಾಗ್ ಅಂದು ಸ್ಟೇಜ್ ಮೇಲೆ ಬಂದಿತ್ತು. ತಾಯಿ ಚಾಮುಂಡೇಶ್ವರಿಯೇ ಬೆಟ್ಟದಿಂದ ಕೆಳಗಿಳಿದು, ಸೀರೆ, ಒಡವೆ ಬಿಚ್ಚಿಟ್ಟು ಜೀನ್ಸ್ ಧರಿಸಿ ಬಂದಂತೆ ಕಾಣಿಸುತ್ತಿದೆ ಎಂಬ ಡೈಲಾಗೆ ಹೊಡೆದಿದ್ದರು. ಈ ಡೈಲಾಗ್ ಚಾಮುಂಡೇಶ್ವರಿ ಭಕ್ತರು ಕೆಂಗಣ್ಣಿಗೆ ಗುರಿಯಾಗಿತ್ತು. ಅವರ ಭಾವನೆಗೆ ಧಕ್ಕೆ ತಂದಂತ ಫೀಲ್ ಆಗಿತ್ತು. ಹೀಗಾಗಿ ರಕ್ಷಕ್ ಬುಲೆಟ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಬೆನ್ನಲ್ಲೇ ಈಗ ರಕ್ಷಕ್ ಕ್ಷಮೆ ಕೇಳಿದ್ದಾರೆ.

‘ನಾನು ನಿಮ್ಮ ರಕ್ಷಕ್. ಒಂದು ರಿಯಾಲಿಟಿ ಶೋನಲ್ಲಿ ಒಂದು ಸಿನಿಮಾದ ಡೈಲಾಗ್ ಹೇಳಿದ್ದೆ. ಅದು ಚರ್ಚೆಗೆ ಗ್ರಾಸವಾಗಿದೆ. ನಮ್ಮ ತಂದೆಯವರಾದ ದಿವಂಗತ ಬುಲರಟ್ ಪ್ರಕಾಶ್, ನನ್ನ ತಾಯಿಯವರು, ನಮ್ಮ ಮನೆಯವರೆಲ್ಲ ದೈವ ಭಕ್ತರು. ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿ ಬಗ್ಗೆ ಹೇಳುವವನಲ್ಲ. ತಾಯೊ ಚಾಮುಂಡೇಶ್ವರಿ ಆಶೀರ್ವಾದದಿಂದ ಬೆಳೆಯುತ್ತಿದ್ದೇನೆ. ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆಕೋರುತ್ತೇನೆ ಎಂದಿದ್ದಾರೆ.

