ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 03 : ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತುಮುಕೂರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೋರಮ್ಮ(25) ಮತ್ತು ಪ್ರಣೀತಗೌಡ @ಅಜಯ (03) ಮೃತ ದುರ್ದೈವಿಯಾಗಿದ್ದಾರೆ. ಮನೆಯಿಂದ ಬಚ್ಚಲಿಗೆ ಎಳೆದಿರುವ ವಿದ್ಯುತ್ ವೈಯರನ್ನು ಆಕಸ್ಮಿಕವಾಗಿ ಹಿಡಿದುಕೊಂಡ ಪ್ರಣೀತ್ ಗೆ ವಿದ್ಯುತ್ ಶಾಕ್ ಹೊಡಿದಿದೆ. ಇದರಿಂದ ಮಗನನ್ನು ರಕ್ಷಿಸಲು ಹೋದ ಮಗುವಿನ ತಾಯಿ ಬೋರಮ್ಮನವರಿಗೂ ಸಹಾ ವಿದ್ಯುತ್ ಶಾಕ್ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಯಿ ಮಗುವಿನ ಶವ ನೋಡಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಮತ್ತು ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್ ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿಲಾಗಿದೆ.ಈ ಕುರಿತಾಗಿ ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

